science day ಹುಬ್ಬಳ್ಳಿಯ ಐಬಿಎಂಆರ್ ಬಿ.ಇಡಿ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಜ್ಞಾನ ದಿನಾಚರಣೆಯಲ್ಲಿ ಜಿ.ಜಿ. ಪಾಟೀಲ, ಡಾ. ಶಂಕರ ಚಕ್ರವರ್ತಿ, ಪ್ರಕಾಶ ಇಳಕಲ್ಲ, ಜೆ.ಕೆ. ಇಳಗೇರ, ಪ್ರವಿಣ, ಇತರರು ಪಾಲ್ಗೊಂಡಿದ್ದರು.
- ವಿಜ್ಞಾನ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕ ಪಾಟೀಲ ಸಲಹೆ
- ಐಬಿಎಂಆರ್ ಬಿ.ಇಡಿ ಕಾಲೇಜಿನಲ್ಲಿ ವಿಜ್ಞಾನ ದಿನಾಚರಣೆ
ಹುಬ್ಬಳ್ಳಿ; science day ವೈಜ್ಞಾನಿಕ ಮನೋಭಾವ ಹೊಂದುವ ಮೂಲಕ ಪ್ರಶಿಕ್ಷಣಾರ್ಥಿಗಳು ಒಬ್ಬೊಬ್ಬ ವಿಜ್ಞಾನಿಯನ್ನು ಹುಟ್ಟು ಹಾಕುವ ಸಂಕಲ್ಪ ಮಾಡಬೇಕು ಎಂದು ಭೈರಿದೇವರಕೊಪ್ಪದ ಎಸ್.ಜೆ.ಎಸ್.ಎಸ್. ನಿವೃತ್ತ ಹಿರಿಯ ಶಿಕ್ಷಕ ಜಿ.ಜಿ. ಪಾಟೀಲ ಹೇಳಿದರು.
ಇಲ್ಲಿಯ ವಿದ್ಯಾನಗರ ಐಬಿಎಂಆರ್ ಬಿ.ಇಡಿ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ನಿತ್ಯದ ಜೀವನವೂ ವಿಜ್ಞಾನದಿಂದ ಆರಂಭವಾಗುತ್ತದೆ. ಸುಶಿಕ್ಷಿತರು, ಅಶಿಕ್ಷಿತರು ಎಲ್ಲರೂ ವಿಜ್ಞಾನ, ತಂತ್ರಜ್ಞಾನದ ಉಪಯೋಗ ಪಡೆಯುತ್ತಾರೆ. ಒಂದು ವಸ್ತುವನ್ನು ವಿಜ್ಞಾನಿ, ಕವಿ, ಸಾಹಿತಿ, ಶಿಕ್ಷಕ ಕಾಣುವ ರೀತಿ ಬೇರೆಬೇರೆಯಾಗಿರುತ್ತದೆ. ವಿಜ್ಞಾನಿಯು ಆ ವಸ್ತುವಿನ ಸಮಗ್ರ ಅಧ್ಯಯನ ಮಾಡುತ್ತಾನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಶಂಕರ ಚಕ್ರವರ್ತಿ ಮಾತನಾಡಿ, ಭಾರತ ಕಂಡ ಅತ್ಯಂತ ಶ್ರೇಷ್ಠ ವಿಜ್ಞಾನಿ ಸಿ.ವಿ. ರಾಮನ್ ಆಗಿದ್ದಾರೆ. ಸ್ವತಂತ್ರ ಭಾರತದಲ್ಲಿ ವಿಜ್ಞಾನದ ಆವಿಷ್ಕಾರಗಳನ್ನು ಸಮರ್ಪಕವಾಗಿ ತಿಳಿಸಿಕೊಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಮೂಢನಂಬಿಕೆ, ಅಜ್ಞಾನ ತೊಡೆದುಹಾಕಲು ವಿಜ್ಞಾನ ಬೇಕೆಬೇಕು ಎಂದರು.