ಧಾರವಾಡ: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭತಿರ್, ಉದ್ಯೋಗಾಕಾಂಗಳೊಂದಿಗೆ ಚರ್ಚೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೂ. 9ರಿಂದ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಹಿರಿಯ ವಕೀಲ ಬಿ.ಡಿ. ಹಿರೇಮಠ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚಿಸಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ದಿನಾಂಕ ನಿಗದಿಪಡಿಸಬೇಕು. 31 ಜಿಲ್ಲೆಗಳ ಮುಖಂಡರು ನಿಯೋಗದಲ್ಲಿ ಇರಬೇಕು. ಜೂ. 8ರೊಳಗೆ ಚರ್ಚೆಗೆ ಅವಕಾಶ ಸಿಗದಿದ್ದರೆ ಪೊಲೀಸರು ಒಪ್ಪಿಗೆ ನೀಡಲಿ, ಬಿಡಲಿ. ಹೋರಾಟ ಅನಿವಾರ್ಯ ಎಂದರು.
ಯುವಕರು ನೇಮಕಾತಿಗಾಗಿ ವರ್ಷಗಳಿಂದ ಕಾಯ್ದು ಹೋರಾಟ ಮಾಡಿದ್ದಾರೆ. ಪರಿಣಾಮ ರಾಜ್ಯ ಸರ್ಕಾರ ನೇಮಕಾತಿಗೆ ನಿರ್ಧರಿಸಿದ್ದರೂ ಅಧಿಸೂಚನೆ ಹೊರಡಿಸಿಲ್ಲ. ಉದ್ಯೋಗಾಕಾಂಗಳ ಧ್ವನಿಯಾಗಿ ಉತ್ತರ ಕರ್ನಾಟಕ ವಿಕಾಸ ವೇದಿಕೆಯು ಅಖಿಲ ಕರ್ನಾಟಕ ರಾಜ್ಯ ವಿದ್ಯಾಥಿರ್ಗಳ ಸಂ (ಅಕ್ಸಾ) ಸಹಯೋಗದಲ್ಲಿ ಹೋರಾಟ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಕ್ಸಾ ಅಧ್ಯಕ್ಷ ಕಾಂತಕುಮಾರ, ಇತರರಿದ್ದರು.