sattur doctor ಜಿ ಬಿ ಸತ್ತೂರ
ಹುಬ್ಬಳ್ಳಿ: sattur doctor ದೆಹಲಿಯಲ್ಲಿ ಇತ್ತೀಚೆಗೆ ಭಾರತೀಯ ಲಿಪಿಡ್ ಸಂಸ್ಥೆ (ಎಲ್ಎಐ) ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಖ್ಯಾತ ಮಧುಮೇಹ ತಜ್ಞ ಡಾ. ಜಿ.ಬಿ. ಸತ್ತೂರ ಅವರು ಪಾಲ್ಗೊಂಡು ಉಪನ್ಯಾಸ ನೀಡಿದರು.
ಭಾರತೀಯ ಮಧುಮೇಹಿಗಳಲ್ಲಿ ಕೊಲೆಸ್ಟ್ರಾಲ್ ಹಾಗೂ ಇತರ ಕೊಬ್ಬಿನ ಅಂಶಗಳಾದ ಟೆಗ್ಲಿಸಿರೈಡ್ ಮುಂತಾದವುಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ, ಪ್ರತಿಶತಃ 85ರಷ್ಟು ಮಧುಮೇಹಿಗಳಲ್ಲಿ ಕೊಲೆಸ್ಟ್ರಾಲ್ ಅಂಶಗಳ ಏರುಪೇರು ಕಂಡು ಬರುತ್ತದೆ ಎಂದರು.
ಪ್ರತಿ ನೂರು ಜನರಲ್ಲಿ 15ಕ್ಕಿಂತ ಹೆಚ್ಚು ಜನರಲ್ಲಿ ಮಧುಮೇಹ ಇರುವುದು ಮತ್ತು ಅಷ್ಟೇ ಪ್ರಮಾಣದಲ್ಲಿ ಪೂರ್ವ ಮಧುಮೇಹ ಇರುವುದು ಕಂಡು ಬರುತ್ತದೆ. ಅವರು ಕೂಡ ಜೀವನ ಶೈಲಿ ಬದಲಾವಣೆ ಮಾಡದಿದ್ದಲ್ಲಿ ಮಧುಮೇಹ ಮತ್ತು ಅದರಿಂದ ತೊಂದರೆ ಉಂಟಾಗುವ ಸಂಭವ ಇದೆ ಎಂದು ಎಚ್ಚರಿಕೆ ನೀಡಿದರು.
ಭಾರತೀಯರು ಹೆಚ್ಚು ಅನ್ನ, ಪಿಷ್ಠ ಪದಾರ್ಥಗಳ ಸೇವನೆ ಮಾಡುವುದು ಇದಕ್ಕೆ ಕಾರಣ. ಸುದೈವದಿಂದ ಇತ್ತೀಚೆಗೆ ನಾನಾ ಔಷಧಿಗಳಿಂದ ಕೊಬ್ಬು ನಿಯಂತ್ರಣ ಸಾಧ್ಯವಾಗಿದೆ. ದುರ್ದೈವವೆಂದರೆ ಕೇವಲ ಶೇ. 60ರಷ್ಟು ಯುವಕರು ನಿತ್ಯ ವ್ಯಾಯಾಮ ಮಾಡಿ ಉತ್ತಮ ಜೀವನ ಶೈಲಿ ಅನುಸರಿಸುತ್ತಿದ್ದಾರೆ ಎಂದರು.
ಹೊಟ್ಟೆಯಲ್ಲಿಯ ಕೊಬ್ಬಿನ ಅಂಶ ಬಹಳ ಹಾನಿಕರವಾಗಿದ್ದು, ಮಧುಮೇಹವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಚಿಕಿತ್ಸೆಯನ್ನು ಜೀವನ ಪೂರ್ತಿ ತೆಗೆದುಕೊಳ್ಳುವ ಅನಿವಾರ್ಯ ಎದುರಾಗುತ್ತದೆ. ಪ್ರತಿ ವರ್ಷ ಒಮ್ಮೆಯಾದರೂ ಮಧುಮೇಹಿಗಳು ಲಿಪಿಡ್ ರಕ್ತ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು. 18 ವರ್ಷದ ಮಕ್ಕಳಿಗೆ ಕಾಲೇಜ್ ಸೇರುವ ಮುನ್ನ ಲಿಪಿಡ್ ಮತ್ತು ಸಕ್ಕರೆಯ ಪರೀಕ್ಷೆಯನ್ನು ಮಾಡಿಸುವುದು ಉತ್ತಮ ಎಂದು ಡಾ. ಸತ್ತೂರ ಸಲಹೆ ನೀಡಿದರು.
ಸಂಸ್ಥೆಯ ಕಾರ್ಯಾಧ್ಯಕ್ಷ ಮುಂಬೈನ ಡಾ. ಸದಾನಂದ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಸಮ್ಮೇಳನದಲ್ಲಿ ಅಮೆರಿಕೆ ಮತ್ತು ಇಂಗ್ಲಂಡ್ ಸೇರಿ ವಿವಿಧ ಕಡೆಗಳಿಂದ 500ಕ್ಕೂ ಹೆಚ್ಚು ತಜ್ಞ ವೈದ್ಯರು ಭಾಗವಹಿಸಿದ್ದರು.