sant sharif ಹುಬ್ಬಳ್ಳಿಯ ಜನಪದ ಜಗಲಿಯಲ್ಲಿ ಏರ್ಪಡಿಸಿದ್ದ ಶರೀರ ವಿಚಾರಧಾರೆ ಚಿಂತನ, ಗಾಯನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಮವಸ್ತ್ರ, ಪಾಠೋಪಕರಣ ವಿತರಿಸಲಾಯಿತು. ಡಾ. ಡಿ.ಎಂ. ಹಿರೇಮಠ, ಡಾ. ರಾಮು ಮೂಲಗಿ, ಡಾ. ಬಸವರಾಜ ನಾಗವ್ವನವರ, ಡಾ. ಮಹೇಶ ಹೊರಕೇರಿ, ಶಾಂತಣ್ಣ ಕಡಿವಾಲ, ಇತರರು ಇದ್ದರು. 
ಧಾರವಾಡ

sant sharif ಶರೀಫರು ನಡೆದಾಡುವ ತತ್ವಪದಗಳ ವಿಶ್ವಕೋಶ

ಪ್ರಮುಖ ಮುಖ್ಯಾಂಶಗಳು

  • ಸಂತರ ಜೀವನ ಮೌಲ್ಯ ಅಳವಡಿಸಿಕೊಳ್ಳಿ
  • ಸಾಹಿತಿ ಡಾ. ಡಿ.ಎಂ. ಹಿರೇಮಠ ಸಲಹೆ
ಹುಬ್ಬಳ್ಳಿ: sant sharif ಸಂತ ಶಿಶುನಾಳ ಶರೀಫರ ಜೀವನ, ತತ್ವ ಮತ್ತು ಮೌಲ್ಯಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿದ್ದು, ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಹಿರಿಯ ಸಾಹಿತಿ ಡಾ. ಡಿ.ಎಂ. ಹಿರೇಮಠ ಹೇಳಿದರು.
ಇಲ್ಲಿಯ ಭೈರಿದೇವರಕೊಪ್ಪದ ಡಾ. ರಾಮು ಮೂಲಗಿ ಅವರ ನಿವಾಸದಲ್ಲಿರುವ ಜನಪದ ಜಗಲಿಯಲ್ಲಿ ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್​ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂತ ಶಿಶುನಾಳ ಶರೀಫರ ವಿಚಾರಧಾರೆಯಲ್ಲಿ ತತ್ವಪದಗಳ ಚಿಂತನ ಮತ್ತು ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂತ ಶಿಶುನಾಳ ಶರೀಫರು ನಡೆದಾಡುವ ತತ್ವಪದಗಳ ವಿಶ್ವಕೋಶವಾಗಿದ್ದು, ಕನ್ನಡ ಜನಪದ ಸಾಹಿತ್ಯ ಹಾಗೂ ಸಮಾಜಕ್ಕೆ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಅವರ ತತ್ವಪದಗಳು ಇಂದಿಗೂ ಮಾನವೀಯ ಮೌಲ್ಯಗಳನ್ನು ಸಾರುತ್ತಿವೆ ಎಂದರು.
ಉಪನ್ಯಾಸ ನೀಡಿದ ಡಾ. ಬಸವರಾಜ ನಾಗವ್ವನವರ್​, ಸಂತ ಶಿಶುನಾಳ ಶರೀಫರ ಆದರ್ಶ ಜೀವನ, ತತ್ವ ಚಿಂತನೆ, ಸಾಮಾಜಿಕ ಸಂದೇಶಗಳು ಹಾಗೂ ಅವರ ಪವಾಡಗಳ ಕುರಿತು ವಿವರಿಸಿದರು.
ಕುಮಾರ ಶಿವಸ್ವಾಮಿ ಹಿರೇಮಠ ಅವರು ತತ್ವಪದಗಳ ಸುಮಧುರ ಗಾಯನ ಪ್ರಸ್ತುತಪಡಿಸಿ ಮೆಚ್ಚುಗೆ ಗಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ತನುಶ್ರೀ ಜಕ್ಕನಗೌಡರ, ವೈ.ಸಿ.ಸಿ. ಶಿರೂರು, ಐ.ಬಿ. ಮರ್ಜಡಿ ಅವರನ್ನು ಸನ್ಮಾನಿಸಲಾಯಿತು. ಆರ್​.ಎಂ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ಗಂಗಮ್ಮ ಗಿರಿಯಪ್ಪಗೌಡ ಬಾಳನಗೌಡ ಮೆಟ್ರಿಕ್​ ಪೂರ್ವ ಬಾಲಕರ ವಸತಿ ನಿಲಯದ ವಿದ್ಯಾಥಿರ್ಗಳಿಗೆ ದಾನಿಗಳ ಸಹಕಾರದಿಂದ ಸಮವಸ್ತ್ರ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಸು. ವೀರಣ್ಣ ಶಿವಸಂಗಿ, ಗುರುಸಿದ್ದಪ್ಪ ಜಂಗಣ್ಣವರ, ಡಾ. ಮಹೇಶ ಹೊರಕೇರಿ, ಎಸ್​.ಐ. ಜಕ್ಕನಗೌಡ್ರ, ಸಂಭಾಜಿ ಕಲಾಲ್​, ಬಸವರಾಜ ಯಕಲಾಸಪುರ, ಸುಧಾ ಹನುಮರೆಡ್ಡಿ, ಡಾ. ಶರಣು ಮುಷ್ಟಿಗೇರಿ, ಮೃತ್ಯುಂಜಯ ಮಟ್ಟಿ, ಡಾ. ಅನಿಲ ಮೇತ್ರಿ, ಗದಗಯ್ಯ ಹಿರೇಮಠ, ಎಚ್​.ಎಸ್​. ಕಿರಣ, ಶಿವರುದ್ರಪ್ಪ ಬಡಿಗೇರ ಹಾಗೂ ವಿಜಯ ಪಾಟೀಲ ಉಪಸ್ಥಿತರಿದ್ದರು.