ಕಲಘಟಗಿ ತಾಲೂಕಿನ ಬಿ.ಶೀಗಿಗಟ್ಟಿ ತಾಂಡಾದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾದ ಮನೆಮನೆಗಳಲ್ಲಿ ಸಂತ ಸೇವಾಲಾಲರ ತತ್ವಗಳು ಎಂಬ ಕಾರ್ಯಕ್ರಮ ಉದ್ಘಾಟಿಸಿದ ಮಕ್ಕಳು. ಮೋತಿಲಾಲ್ ಚವ್ಹಾಣ, ಮಂಗಲಪ್ಪ ಲಮಾಣಿ ಇತರರಿದ್ದರು. 
ಧಾರವಾಡ

ಬಂಜಾರ ಸಮಾಜದ ಸಂಸ್ಕೃತಿ ಉಳಿಸಿ, ಬೆಳೆಸೋಣ

ಮಂಜುನಾಥ ಗದಗಿನ
ಕಲಘಟಗಿ: ದೇಶದಲ್ಲಿ ಬಂಜಾರ ಸಂಸ್ಕೃತಿಗೆ ತನ್ನದೆಯಾದ ಇತಿಹಾಸವಿದೆ. ಇತ್ತೀಚಿನ ದಿನಮಾನಗಳಲ್ಲಿ ನಮ್ಮ ಸಂಸ್ಕೃತಿ ಮರೆತು ಪರಕೀಯರ ಸಂಸ್ಕೃತಿಯತ್ತ ನಾವು ಹೆಜ್ಜೆ ಹಾಕುತ್ತಿರುವುದರಿಂದ ಬಂಜಾರ ಸಂಸ್ಕೃತಿಯ ಪರಂಪರೆ ನಾಶವಾಗುತ್ತಿದೆ. ಅದನ್ನು ತಡೆಗಟ್ಟುವಲ್ಲಿ ನಾವೆಲ್ಲ ಶ್ರಮಿಸಬೇಕಿದೆ ಎಂದು ಬಂಜಾರ ಸಂಸಕ್ರತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ. ಮೋತಿಲಾಲ್ ಚವ್ಹಾಣ ಹೇಳಿದರು.
ತಾಲೂಕಿನ ಬಿ.ಶೀಗಿಗಟ್ಟಿ ತಾಂಡಾದಲ್ಲಿ ಇತ್ತೀಚೆಗೆ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಬೆಂಗಳೂರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮನೆಮನೆಗಳಲ್ಲಿ ಸಂತ ಸೇವಾಲಾಲರ ತತ್ವಗಳು ರಾರಾಜಿಸಲಿ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ಅವರು ಮಾತನಾಡಿದರು.
ಬಂಜಾರಾ ಸಮಾಜದ ಜಿಲ್ಲಾಧ್ಯಕ್ಷ ಮಂಗಲಪ್ಪ ಲಮಾಣಿ ಮಾತನಾಡಿದರು. ದಿವ್ಯ ಸಾನ್ನಿಧ್ಯವನ್ನು ಭುಜಂಗ ಮಹಾರಾಜರು ವಹಿಸಿದ್ದರು. ಬಂಜಾರ ಸಂಸಕ್ರತಿ ಮತ್ತು ಭಾಷಾ ಅಕಾಡೆಮಿ ಸದಸ್ಯ ಶೇಖಪ್ಪ ಲಮಾಣಿ, ಉಪನ್ಯಾಸಕ ಮಾರುತಿ ಲಮಾಣಿ, ರಾಯಪ್ಪ ಲಮಾಣಿ, ಧೇನಪ್ಪ ಲಮಾಣಿ, ಸೋಮಲಪ್ಪ ಲಮಾಣಿ, ಪಾಂಡು ಲಮಾಣಿ, ರವಿ ಲಮಾಣಿ, ರೇಣುಕಾ ಲಮಾಣಿ, ಹೂವಕ್ಕ ಲಮಾಣಿ, ತುಳಸವ್ವ ಲಮಾಣಿ, ಲಕ್ಷ್ಮಣ ಲಮಾಣಿ, ಷಣ್ಮುಕ ಗೋಕುಲ, ಮಾರುತಿ ಲಮಾಣಿ, ಆನಂದ ಲಮಾಣಿ, ಕುಮಾರ ಲಮಾಣಿ ಇತರರಿದ್ದರು.