award ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ  
ಧಾರವಾಡ

ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನ award

ಆನಂದಕುಮಾರ ಅಂಗಡಿ

ಪ್ರಮುಖ ಮುಖ್ಯಾಂಶಗಳು

  • ‘ವಿಜಯವಾಣಿ‘ಯ ಬಸವರಾಜ ಗರಗ ಆಯ್ಕೆ
  • ಸಚಿವ ಸಂತೋಷ ಲಾಡ್ ಉದ್ಘಾಟಿಸುವರು.
  • ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 232ನೇ ಜಯಂತ್ಯುತ್ಸವ

ಹುಬ್ಬಳ್ಳಿ :

award ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಆ. 15ರಂದು ಸಂಜೆ 4 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 232ನೇ ಜಯಂತ್ಯುತ್ಸವ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹುಬ್ಬಳ್ಳಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ನಿರ್ವಿುಸಲಾಗಿರುವ ತಾಯಿ ಮಹದಾಯಿ ವೇದಿಕೆಯಲ್ಲಿ ಏರ್ಪಡಿಸಿರುವ ಸಮಾರಂಭವನ್ನು ಸಚಿವ ಸಂತೋಷ ಲಾಡ್ ಉದ್ಘಾಟಿಸುವರು.

ಧಾರವಾಡ ಜಿಲ್ಲೆಯ ಎಲ್ಲ ಶಾಸಕರು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಸಮಾಜ ಸೇವಕರು ಪಾಲ್ಗೊಳ್ಳುವರು ಎಂದು ಹೇಳಿದರು.

ಮಾಧ್ಯಮ ಕ್ಷೇತ್ರದಿಂದ ಪ್ರಸಕ್ತ ಸಾಲಿನ ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’ಯ ಉಪ ಸಂಪಾದಕ ಬಸವರಾಜ ಗರಗ ಆಯ್ಕೆಯಾಗಿದ್ದಾರೆ.

ಪತ್ರಕರ್ತರಾದ ಹರ್ಷಾ ಕುಲಕರ್ಣಿ, ಮೈಲಾರಪ್ಪ ಕರಿಲಿಂಗಣ್ಣನವರ, ಮುಕುಂದ ಕುಲಕರ್ಣಿ, ಸುಭಾಷ ಡಂಕ್, ಶ್ರೀಪಾದ ಕುಲಕರ್ಣಿ ಅವರು ಸಹ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಿಕ್ಷಣ ಕ್ಷೇತ್ರದಿಂದ ಸಹದೇವಪ್ಪ ಅಮ್ಮಿನಬಾವಿ, ಜಾನಪದ ಕಲಾವಿದ ಕವಿ ಲಾಲಸಾಬ್ ಪಶುಪತಿಹಾಳ, ಆಟೋ ಚಾಲಕ ರಾಜೇಶ ಹೆಬ್ಬಳ್ಳಿ, ಸಮಾಜ ಸೇವಕರಾದ ಶ್ರೀನಿವಾಸ ಚೆನುತಪಲ್ಲೆ, ರೆವರೆಂಡ್ ಸ್ಯಾಸನ್ ಡಿ. ಅವರು ಆಯ್ಕೆಯಾಗಿದ್ದಾರೆ.

ರಾಣಿ ಚನ್ನಮ್ಮ ಪ್ರಶಸ್ತಿಗೆ ಸಮಾಜ ಸೇವಕಿಯರಾದ ಭಾರತಿ ಕೊಳ್ಳಿ, ಚೇತನಾ ದೇವೇಂದ್ರ ಭಾಜನರಾಗಿದ್ದಾರೆ. ಕರ್ನಾಟಕ ಜಾನಪದ ಸಂಗೀತ ಗಾನ ಕಲಾರತ್ನ ಪ್ರಶಸ್ತಿಯನ್ನು ಬಂಕಾಪುರದ ಗುರು ಚಲವಾದಿ ಅವರಿಗೆ ಪ್ರದಾನ ಮಾಡಲಾಗುತ್ತದೆ ಎಂದು ವಿವರಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ, ವಿಜಯಪುರ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹಾಗೂ ಬೆಂಗಳೂರಿನ ಎರಡನೇ ಟರ್ವಿುನಲ್​ಗೆ ಡಾ. ರಾಜಕುಮಾರ ಹೆಸರು ನಾಮಕರಣ ಮಾಡುವಂತೆ ಇದೇ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.