ಹುಬ್ಬಳ್ಳಿ ಇಲ್ಲಿನ ಭೈರಿದೇವರಕೊಪ್ಪದ ಸನಾ ಎಜುಕೇಷನಲ್ ಆವರಣದಲ್ಲಿ ನ. 22ರಂದು ವಿಜ್ಞಾನ ಮೇಳ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಅಶ್ರಫ್ ಅಲಿ ಬಶೀರ್ ಅಹಮದ್ ಹೇಳಿದರು.
ಹುಬ್ಬಳ್ಳಿ: ಇಲ್ಲಿನ ಭೈರಿದೇವರಕೊಪ್ಪದ ಸನಾ ಎಜುಕೇಷನಲ್ ಆವರಣದಲ್ಲಿ ನ. 22ರಂದು ಬೆಳಗ್ಗೆ 10.30ಕ್ಕೆ ಹುಬ್ಬಳ್ಳಿ ಅಂತರ-ಶಾಲಾ ವಿಜ್ಞಾನ ಮೇಳ-2025 ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಅಶ್ರಫ್ ಅಲಿ ಬಶೀರ್ ಅಹಮದ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಶಾಲಾ ಪಠ್ಯಕ್ರಮ ಮತ್ತು ನೈಜ ಜಗತ್ತಿನ ವೈಜ್ಞಾನಿಕ ಸಂಶೋಧನೆಗಳ ನಡುವೆ ಸಂಬಂಧ ನಿರ್ಮಾಣ, ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಗುಣ ಬೆಳೆಸುವುದು ಮೇಳದ ಪ್ರಮುಖ ಉದ್ದೇಶವಾಗಿದೆ ಎಂದರು.
ಮೇಳವು 6ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ಭೌತ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಸಂಬಂಧಿತ ತತ್ವಗಳು. ಜೀವ ವಿಜ್ಞಾನ ಜೀವಶಾಸ್ತ್ರ, ಆರೋಗ್ಯ ವಿಜ್ಞಾನ ಮತ್ತು ಜೀವ ವ್ಯವಸ್ಥೆ, ಪರಿಸರ ವಿಜ್ಞಾನ ಸಸ್ಟೇನಿಬಿಲಿಟಿ. ಪರಿಸರಶಾಸ್ತ್ರ ಮತ್ತು ಪರಿಸರ ಸಂರಕ್ಷಣೆ ವಿಭಾಗಗಳಲ್ಲಿ ಮಾದರಿಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿದೆ ಎಂದರು.
ಮೊಹಮ್ಮದ್ ಅಯೂಬ್ ಸವಣೂರು ಮಾತನಾಡಿ, ವಿವಿಧ ಶಾಲೆಯ 120 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಪಾಲ್ಗೊಳ್ಳುವ ವಿದ್ಯಾರ್ಥಿಗಳು, ಮಾರ್ಗದರ್ಶಕ ಶಿಕ್ಷಕರು ಮತ್ತು ಶಾಲೆಗಳಿಗೆ ಪ್ರಮಾಣಪತ್ರ ಮತ್ತು ಬಹುಮಾನ ನೀಡಲಾಗುತ್ತದೆ. 22ರಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಮಾದರಿ ಪ್ರದರ್ಶನ. ಸಂಜೆ 4.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.
ಮೊಹಮ್ಮದ್ ತಾರಿಕ್ ಮುಜಾಹಿದ್ ಮಾತನಾಡಿ, ಕಾರ್ಯಕ್ರಮದಲ್ಲಿ ಕವಿವಿ ಉಪಕುಲಪತಿ ಡಾ. ಎ.ಎಂ. ಖಾನ್, ಡಿಡಿಪಿಐ ಎಸ್.ಎಸ್. ಕೆಳದಿಮಠ, ರಾಯಚೂರಿನ ಮೊಹಮ್ಮದ್ ಅಬ್ದುಲ್ಲಾ ಜಾವೇದ್, ಹುಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಡಿಡಿಪಿಯು ಡಾ. ತೇಜಸ್ವಿನಿ ನಾರಾಯಣಕರ ಇತರರು ಪಾಲ್ಗೊಳ್ಳುವರು ಎಂದರು. ಅಬ್ದುಲ್ ರೆಹಮಾನ ಮುಲ್ಲಾ, ಸರಫರಾಜ ಅತ್ತಾರ, ಮೊಹಮ್ಮದ್ ಅಬ್ದುಲ್ಲಾ ಜಾವೇದ, ಇದ್ದರು.