ಬೆಂಗಳೂರಿನಿಂದ ಪಾರ್ಸಲ್ ಕಳುಹಿಸಿದ ಮೊಬೈಲ್ ಫೋನ್ ಕಳವು samsung 
ಧಾರವಾಡ

(samsung) 40 ಪಾರ್ಸಲ್ ಕಳುಹಿಸಿದ ಸ್ಯಾಮಸಂಗ್ ಮೊಬೈಲ್ ಫೋನ್ ಕಳವು

ಮರಿದೇವ ಹೂಗಾರ
ಹುಬ್ಬಳ್ಳಿ: ಬೆಂಗಳೂರಿನಿಂದ ಪಾರ್ಸಲ್ ಕಳುಹಿಸಿದ 6.44 ಲಕ್ಷ ರೂ. ಮೌಲ್ಯದ 40 ಸ್ಯಾಮಸಂಗ್ (samsung) ಕಂಪನಿ ಮೊಬೈಲ್ ಫೋನ್‌ಗಳು ಕಳವಾಗಿರುವ ಕುರಿತು ಇಲ್ಲಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಬಿಎಎಂ ಟೆಲಿ ಮೊಬೈಲ್ ಪ್ರೈವೆಟ್ ಲಿ. ಕಂಪನಿಯಿಂದ ಮೊಬೈಲ್ ಫೋನ್‌ಗನ್ನು ಖರೀದಿಸಿ, ಹುಬ್ಬಳ್ಳಿಯ ವಿವಿಧ ಅಂಗಡಿಗಳಿಗೆ ನೀಡಲು ಕೋರಿಯರ್ ಮೂಲಕ ಕಳುಹಿಸಿದ್ದಾರೆ. ಆದರೆ, ಪಾರ್ಸಲ್ ಬಂದು ಸೇರದೆ ಯಾರೋ ಅವುಗಳನ್ನು ಕಳವು ಮಾಡಿದ್ದಾರೆ ಎಂದು ಡಿಸ್ಟ್ರಿಬ್ಯೂಟರ್ ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್ ಪ್ರವೀಣ ಜೋಶಿ ಎಂಬುವವರು ದೂರಿನಲ್ಲಿ ತಿಳಿಸಿದ್ದಾರೆ.