ಹುಬ್ಬಳ್ಳಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ samruddhi bank ಸಮೃದ್ಧಿ ಜೀವನ್ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭ ಹಾಗೂ ಷೇರುದಾರರ ಸಮಾಗಮ ಕಾರ್ಯಕ್ರಮವನ್ನು ಧರ್ಮದರ್ಶಿ ಆನಂದ ಗುರುಸ್ವಾಮಿ ಉದ್ಘಾಟಿಸಿದರು. 
ಧಾರವಾಡ

samruddhi bank ಸಹಕಾರಿ ಸಂಘಕ್ಕೆ ಆರ್ಥಿಕ ಶಿಸ್ತು ಅಗತ್ಯ

ಹುಬ್ಬಳ್ಳಿ: ಇಲ್ಲಿಯ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ samruddhi bank ಸಮೃದ್ಧಿ ಜೀವನ್ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭ ಹಾಗೂ ಷೇರುದಾರರ ಸಮಾಗಮ ಕಾರ್ಯಕ್ರಮವನ್ನು ಶುಕ್ರವಾರ ಏರ್ಪಡಿಸಲಾಗಿತ್ತು.
ಧರ್ಮದರ್ಶಿ ಆನಂದ ಗುರುಸ್ವಾಮಿ ಉದ್ಘಾಟಿಸಿ ಮಾತನಾಡಿ, ಸಂಘವು ಇನ್ನಷ್ಟು ಉತ್ತರೋತ್ತರವಾಗಿ ಬೆಳೆಯಲು ಶುಭ ಹಾರೈಸಿದರು.
ಹಿರಿಯ ಲೆಕ್ಕಪರಿಶೋಧಕ ಬಿ.ಸಿ. ಶೆಟ್ಟಿ ಮಾತನಾಡಿ, ಪ್ರತಿಯೊಂದು ಸಹಕಾರಿ ಸಂಘಗಳು ಆರ್ಥಿಕ ಶಿಸ್ತು ರೂಢಿಸಿಕೊಳ್ಳಬೇಕು. ಅಂದಾಗ ಮಾತ್ರ ಏರುಗತಿಯ ಅಭಿವೃದ್ಧಿ ಕಾಣಲು ಸಾಧ್ಯ ಎಂದರಲ್ಲದೆ, ಹಲವು ರೀತಿಯ ಮಾರ್ಗದರ್ಶನ ನೀಡಿದರು.
ಕಾನೂನು ತಜ್ಞ ಬಿ. ಶಾಂತಾರಾಮ ಶೆಟ್ಟಿ ಕಾನೂನು ಸಂಬಂಧಿತ ಮಾಹಿತಿ ಹಂಚಿಕೊಂಡರು.
ನಿರ್ದೇಶಕ ಹಾಗೂ ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯರಾದ ಜೆ.ಕೆ. ಶೆಟ್ಟಿ ಶುಭ ಹಾರೈಸಿದರು.
ಸಂಸ್ಥೆಯ ಪ್ರಥಮ ಷೇರುದಾರರು ಹಾಗೂ ಆಹ್ವಾನಿತ ನಿರ್ದೇಶಕ ಸಂಚಯ ಶೆಟ್ಟಿ ಅವರಿಗೆ ಷೇರು ಪ್ರಮಾಣ ಪತ್ರ ವಿತರಿಸಲಾಯಿತು. ಸಂಸ್ಥೆಯ ಪ್ರಥಮ ಠೇವಣಿದಾರರಾದ ಆನಂದ ಗುರುಸ್ವಾಮಿ ಅವರಿಗೆ ಠೇವಣಿ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಸಂಸ್ಥೆಯ ಪ್ರಥಮ ಪಿಗ್ಮಿ ಖಾತೆಯನ್ನು ರಾಜೇಶ ಶೆಟ್ಟಿ ಆರಂಭಿಸಿದರು.
ಬಳಿಕ ಪ್ರಸನ್ನ ಮಹಾಗಣಪತಿ ದೇವರ ಸಾನ್ನಿಧ್ಯದಲ್ಲಿ ರಜತ ಶೆಟ್ಟಿ ದಂಪತಿ ಪೂಜಾ ಸಂಕಲ್ಪದೊಂದಿಗೆ ರಂಗಪೂಜೆ ನೆರವೇರಿಸಿ ಪ್ರಸಾದ ವಿತರಿಸಲಾಯಿತು.
ಪ್ರಮುಖರಾದ ಎಂ. ಸತೀಶ್ಚಂದ್ರ ಶೆಟ್ಟಿ, ಕೆ.ಟಿ. ಶೆಟ್ಟಿ, ಜಯರಾಮ ಶೆಟ್ಟಿ, ರತ್ನಾಕರ ಶೆಟ್ಟಿ, ಅಶೋಕ ಕುಮಾರ ಶೆಟ್ಟಿ, ಬಿ. ಪ್ರೇಮಾನಂದ ಶೆಟ್ಟಿ, ವಿಶ್ವನಾಥ ಶೆಟ್ಟಿ, ರಘುರಾಮ ಶೆಟ್ಟಿ, ತ್ರಿಯಂಬಕ ಪಾಟೀಲ, ಶೋಧನ ಶೆಟ್ಟಿ, ರವೀಂದ್ರ ಕೋಟೆಕಾರ, ದಿವ್ಯಾ ಶೆಟ್ಟಿ, ವಂದನಾ ಶೆಟ್ಟಿ, ರೋಶನಿ ಮಾಲೋದೇ ಇತರರಿದ್ದರು.
ಪ್ರತಿಮಾ ಶೆಟ್ಟಿ ಹಾಗೂ ತಂಡ ಪ್ರಾರ್ಥಿಸಿತು. ಬಿ. ಶಾಂತಾರಾಮ ಶೆಟ್ಟಿ ನಿರೂಪಿಸಿದರು. ರತ್ನಾಕರ ಶೆಟ್ಟಿ ಸ್ವಾಗತಿಸಿದರು. ದಿನೇಶ ಶೆಟ್ಟಿ ವಂದಿಸಿದರು.