Samanvay fest ಕಲಾ ಉತ್ಸವದ ಮಾಹಿತಿ. 
ಧಾರವಾಡ

Samanvay fest ಐಬಿಎಂಆರ್​ ನಲ್ಲಿ ಕಲಾ ಉತ್ಸವ

ಪ್ರಮುಖ ಮುಖ್ಯಾಂಶಗಳು

  • ೨೮ ರಂದು ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ
  • ಕಲಾ, ಶಿಕ್ಷಣ ಹಾಗೂ ಕಾನೂನು ವಿದ್ಯಾರ್ಥಿಗಳಿಗೆ ಅವಕಾಶ
ಹುಬ್ಬಳ್ಳಿ: samanvay fest ಇಲ್ಲಿಯ ವಿದ್ಯಾನಗರ ಅಕ್ಷಯ ಕಾಲನಿಯಲ್ಲಿರುವ ಐಬಿಎಂಆರ್​ ಸಮೂಹ ಸಂಸ್ಥೆಯ ಬಿಎ, ಬಿ.ಇಡಿ ಹಾಗೂ ಕಾನೂನು ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಸಮನ್ವಯ 2ಕೆ26 "ಹಾರ್ಮನಿ ಆಫ್ ಆರ್ಟ್ಸ್​, ಎಜುಕೇಶನ್​ ಹಾಗೂ ಲಾ' ಉತ್ಸವವನ್ನು ಏ. 28ರಂದು ಬೆಳಗ್ಗೆ 8.30ಕ್ಕೆ ಏರ್ಪಡಿಸಲಾಗಿದೆ.
ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಅನಾವರಣ ಮಾಡಬಹುದು.
ಸಾಂಸ್ಕೃತಿಕ ಸಮೂಹ ನೃತ್ಯ, ಜಾನಪದ ನೃತ್ಯ, ಸಾಂಪ್ರದಾಯಿಕ ನೃತ್ಯ, ಗೀತಗಾಯನ ಸ್ಪರ್ಧೆ, ಜನಪದ ಗೀತೆಗಳು, ಭಾವಗೀತೆಗಳು, ಸಂಗೀತ ಪರಿಕರಗಳೊಂದಿಗೆ ಪಾಶ್ಚಿಮಾತ್ಯ ಗೀತೆ,
ಏಕಪಾತ್ರಾಭಿನಯ, ಮೂಕಾಭಿನಯ, ಆಶುಭಾಷಣ, ಐತಿಹಾಸಿಕ ಪ್ರದರ್ಶನ.
ಬಿ.ಇಡಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮದಲ್ಲಿ ಬರುವ ಮನೋವಿಜ್ಞಾನ ಸಿದ್ಧಾಂತಗಳ ಮಾದರಿ ತಯಾರಿಕೆ. ಸಾಂಪ್ರದಾಯಿಕ ನಡಿಗೆ, ಅಗ್ನಿ ರಹಿತ ಅಡುಗೆ ತಯಾರಿ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಾಚಾರ್ಯರ ಅನುಮತಿಯೊಂದಿಗೆ ಪಾಲ್ಗೊಳ್ಳಲು ಪ್ರಕಟಣೆ ಕೋರಿದೆ.