sakriya foundation ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಗುಜರಾತ್‌ನ ಸಮೃದ್ಧ ಕರಕುಶಲ ಪರಂಪರೆಯ ಭವ್ಯ ಪ್ರದರ್ಶನ ‘ಹುನರ್ ಎ ಭಾರತ್ ಮಹೋತ್ಸವ-2026’ದಲ್ಲಿದ್ದ ಕರಕುಶಲ ವಸ್ತುಗಳನ್ನು ಶಾಸಕ ಮಹೇಶ ಟೆಂಗಿನಕಾಯಿ, ಎಂಎಲ್‌ಸಿ ಲಿಂಗರಾಜ ಪಾಟೀಲ ಶನಿವಾರ ವೀಕ್ಷಿಸಿದರು. 
ಧಾರವಾಡ

sakriya foundation ಕರಕುಶಲ ವಸ್ತುಗಳು ಸಂಸ್ಕೃತಿಯ ಪ್ರತೀಕ

ಹುಬ್ಬಳ್ಳಿ: ಸಕ್ರಿಯಾ ಸಮ್ಯಕ್‌ದರ್ಶನ್ ಫೌಂಡೇಷನ್ sakriya foundation, ಗುಜರಾತ್ ಸರ್ಕಾರದ ಉದ್ಯಮ ಮತ್ತು ಗಣಿ ಇಲಾಖೆ ವತಿಯಿಂದ ಗುಜರಾತ್‌ನ ಸಮೃದ್ಧ ಕರಕುಶಲ ಪರಂಪರೆಯ ಭವ್ಯ ಪ್ರದರ್ಶನ ‘ಹುನರ್ ಎ ಭಾರತ್ ಮಹೋತ್ಸವ-2026’ ಕಾರ್ಯಕ್ರಮವನ್ನು ಇಲ್ಲಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿ ಶನಿವಾರ ಏರ್ಪಡಿಸಲಾಗಿತ್ತು.
ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಕರಕುಶಲ ವಸ್ತುಗಳಿಗೆ ಬಹಳ ಬೆಲೆ ಇದೆ. ವಿದೇಶದಲ್ಲೂ ಇವುಗಳಿಗೆ ಬಹು ಬೇಡಿಕೆ ಇದೆ. ಇದು ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯ ಪ್ರತೀಕವೂ ಹೌದು. ಗ್ರಾಮೀಣ ಭಾಗದಿಂದ ಆರಂಭವಾದ ಈ ಕರಕುಶಲ ಕಲೆ ವಿದೇಶದಲ್ಲಿಯೂ ವಿಜೃಂಭಿಸುತ್ತಿರುವುದಕ್ಕೆ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಪ್ರೋತ್ಸಾಹವೇ ಕಾರಣ ಎಂದು ಬಣ್ಣಿಸಿದರು.
ಎಂಎಲ್‌ಸಿ ಲಿಂಗರಾಜ ಪಾಟೀಲ ಮಾತನಾಡಿ, ದೇಶೀಯ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ. ಅದರಲ್ಲೂ ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ವೇದಿಕೆ ಕಲ್ಪಿಸುವ ಅಗತ್ಯವಿದೆ. ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಬಹಳಷ್ಟು ಪೂರಕ ಯೋಜನೆಗಳನ್ನು ರೂಪಿಸಿದೆ ಎಂದರು.
ನಿರ್ದೇಶಕ ಹೇಮಂತ ಕುಂಧಿಯಾ ಮಾತನಾಡಿ, ಈ ಮಹೋತ್ಸವವು ಸೆ. 13ರವರೆಗೆ ನಡೆಯಲಿದೆ. ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಜನರಿಗಾಗಿ ತೆರೆದಿರಲಿದೆ ಎಂದರು.
ನಿರ್ದೇಶಕ ವಿಕ್ಕಿ ಸೋವಸಿಯಾ, ಮಾರ್ಕೆಟಿಂಗ್ ಮುಖ್ಯಸ್ಥರಾದ ಡಾ. ಸ್ನೇಹಲ್ ಮಕ್ವಾನ, ಪರಶುರಾಮ ಪೂಜಾರ ಇತರರಿದ್ದರು.