ಹುಬ್ಬಳ್ಳಿಯ ಜೆಎಸ್‌ಎಸ್ ಸಕ್ರಿ ಕಾನೂನು ಕಾಲೇಜ್‌ನ sakri law college ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ವೃತ್ತಿ ಮಾರ್ಗದರ್ಶನ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರವನ್ನು ನ್ಯಾಯಾಧೀಶ ಮಲ್ಲಿಕಾರ್ಜುನ ಉದ್ಘಾಟಿಸಿದರು.
ಹುಬ್ಬಳ್ಳಿ: ಇಲ್ಲಿಯ ಹೆಗ್ಗೇರಿಯ ಜೆಎಸ್‌ಎಸ್ ಸಕ್ರಿ ಕಾನೂನು ಕಾಲೇಜ್‌ನ sakri law college ಸಭಾಂಗಣದಲ್ಲಿ ವೃತ್ತಿ ಮಾರ್ಗದರ್ಶನ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರವನ್ನು ಶನಿವಾರ ಏರ್ಪಡಿಸಲಾಗಿತ್ತು.
ಹುಬ್ಬಳ್ಳಿ ಜೆಎಂಎಫ್‌ಸಿ 2ನೇ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಉದ್ಘಾಟಿಸಿ ಮಾತನಾಡಿ, ನ್ಯಾಯದಾನ ಪ್ರಕ್ರಿಯೆಯಲ್ಲಿ ತೀರ್ಪು ಬರೆಯುವ ಕಲೆಯು ಅತ್ಯಂತ ಪ್ರಮುಖವಾದದು. ಕರಾರುವಕ್ಕಾದ ತೀರ್ಪುಗಳು ಕಾನೂನಿನ ಸ್ಪಷ್ಟತೆಯನ್ನು ಪ್ರತಿಬಿಂಬಿಸುತ್ತವೆ ಎಂದರು.
ಹೈಕೋರ್ಟ್ ವಕೀಲ ಶಿವರಾಜ ಬೆಳ್ಳೊಳ್ಳಿ ಮಾತನಾಡಿ, ವಕಾಲತ್ತು ಕಲೆ ಮತ್ತು ಸಿವಿಲ್ ಕರಡು ರಚನೆ ಕುರಿತು ವಿವರಿಸಿದರು.
ಹೈಕೋರ್ಟ್ ವಕೀಲ ವಿಶ್ವನಾಥ ಬಿಚಗತ್ತಿ, ಕ್ರಿಮಿನಲ್ ಅರ್ಜಿಗಳ ಸಿದ್ಧತೆ ಮತ್ತು ಸಾಕ್ಷಿಗಳ ಮರು ವಿಚಾರಣೆಗೆ ಬೇಕಾದ ಕಲೆ ಕುರಿತು ವಿವರಿಸಿದರು.
ಪ್ರಾಚಾರ್ಯೆ ಡಾ. ರೂಪಾ ಇಂಗಳಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಪನ್ಯಾಸಕರಾದ ಡಾ. ದೀಪಾ ಪಾಟೀಲ, ಪ್ರೊ. ಪೂರ್ಣಿಮಾ ಕುರ್ಡಿಕೇರಿ, ಶೈಲಜಾ ಹಗೇದಾಳ, ಸುರೇಶ ಲಿಂಬಿಕಾಯಿ, ಸಿಬ್ಬಂದಿ ಸತೀಶ ಸಿ.ವಿ., ಸುರೇಶ ಲಮಾಣಿ, ಪರಸಪ್ಪ ಮಾಂಗ, ಐ.ಎಫ್. ಗೋಪಾಲಿ, ಗುಡ್ಡಪ್ಪ ಆಡೂರ, ರಫೀಕ್ ಭಾರುದ್ವಾಲೆ ಇತರರಿದ್ದರು.