rural development ಕರ್ನಾಟಕ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ, ಚುಟುಕು ಸಾಹಿತ್ಯ ಪರಿಷತ್​ ತಾಲೂಕು ಅಧ್ಯಕ್ಷ ವೀರಣ್ಣ ಕುಬಸದ ಮಾತನಾಡಿದರು. 
ಧಾರವಾಡ

rural development ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ವಾರ್ಷಿಕೋತ್ಸವ

ಪ್ರಮುಖ ಮುಖ್ಯಾಂಶಗಳು

  • ವಿಧಾಯಕ ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧತೆ
  • 400 ಪುಟದ ಸ್ಮರಣ ಸಂಚಿಕೆ ಗ್ರಾಮ್ಯ ಬೆಳಕು
ಹುಬ್ಬಳ್ಳಿ: rural development ಕರ್ನಾಟಕ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಕಲಘಟಗಿ ಶಾಖೆಯ 20ನೇ ವಾರ್ಷಿಕೋತ್ಸವ ಅಂಗವಾಗಿ ಅದ್ದೂರಿ ಸಮಾರಂಭವನ್ನು ಡಿಸೆಂಬರ್​ನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಂಸ್ಥಾಪಕ ಅಧ್ಯಕ್ಷ, ಚುಟುಕು ಸಾಹಿತ್ಯ ಪರಿಷತ್​ ತಾಲೂಕು ಅಧ್ಯಕ್ಷ ವೀರಣ್ಣ ಕುಬಸದ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದರಿಯಾಗುವ ರೀತಿಯಲ್ಲಿ ವಾರ್ಷಿಕೋತ್ಸವ ಏರ್ಪಡಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 400 ಪುಟದ ಸ್ಮರಣ ಸಂಚಿಕೆ "ಗ್ರಾಮ್ಯ ಬೆಳಕು' ಹೊರತರಲಾಗುತ್ತಿದೆ. ಕಲಾವಿದರು, ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹನೀಯರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ ಎಂದರು.
2007ರಲ್ಲಿ ಪ್ರಾರಂಭವಾದ ಸಂಸ್ಥೆಯು ಗ್ರಾಮೀಣಾಭಿವೃದ್ಧಿ, ಶೈಕ್ಷಣಿಕ, ಸಾಹಿತ್ಯ, ಕಲೆಯ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದೆ. ಈ ವಿಶೇಷ ಸಮಾರಂಭಕ್ಕೆ ರಾಜ್ಯಪಾಲರಿಗೆ ಆಹ್ವಾನ ನೀಡಲಾಗಿದೆ. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್​ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಲಘಟಗಿ ಉತ್ಸವ, ಮಲೆನಾಡ ಹಬ್ಬ, ಚುಟುಕು ಸಾಹಿತ್ಯ ಸಮ್ಮೇಳನ ಸೇರಿ ಇಡೀ ದಿನ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಕವಿಗಳು, ಕಲಾವಿದರು, ಸಾಹಿತಿಗಳು, ಚಿಂತಕರು ಹಾಗೂ ಸಮಾಜ ಸೇವಕರನ್ನು ಸನ್ಮಾನಿಸಲಾಗುವುದು. ಸರ್ವಧರ್ಮದ ಗುರುಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಭಾವೈಕ್ಯತೆ ಸಂದೇಶ ಸಾರುವುದು ಸೇರಿ ವೈವಿದ್ಯಮಯ ಕಾರ್ಯಕ್ರಮಗಳ ಮೂಲಕ ಇದನ್ನು ಐತಿಹಾಸಿಕ ಮಾಡುವ ಆಶಯ ಇದೆ. ಗ್ರಾಮೀಣ ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ಜನಪದ ಕಲೆ ಉಳಿಸಿ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದರು.
ಸಂಸ್ಥೆಯ ಮಂಜುನಾಥ ನಾಗನಗೌಡ್ರ, ವಿ.ಜಿ. ಪಾಟೀಲ, ಚನ್ನಬಸಯ್ಯ ಅಂದಾನಿಮಠ, ಬಿ.ವಿ. ನಿಂಗಪ್ಪನವರ, ಮಲ್ಲಯ್ಯ ಸಂಬಾಳಿಮಠ ಇತರರು ಇದ್ದರು.