run for nature ಗ್ರೀನ್​ ಕರ್ನಾಟಕ ಅಸೋಸಿಯೇಶನ್​​ ಅಧ್ಯಕ್ಷ ಚನ್ನು ಹೊಸಮನಿ, ಗಂಗಾಧರ ಗುಜಮಾಗಡಿ, ಮೇಘರಾಜ ಕೆರೂರ, ರಾಜು ಗೊಂಬಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 
ಧಾರವಾಡ

run for nature ರನ್​ ಫಾರ್ ನೇಚರ್​ 7ರಂದು

ಪ್ರಮುಖ ಮುಖ್ಯಾಂಶಗಳು

  • ಹುಬ್ಬಳ್ಳಿಯಲ್ಲಿ ಬೃಹತ್ ಕಾರ್ಯಕ್ರಮ
  • ಪರಿಸರಕ್ಕಾಗಿ 3ಕೆ, 5ಕೆ ಓಟ
ಹುಬ್ಬಳ್ಳಿ: run for nature ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗ್ರೀನ್​ ಕರ್ನಾಟಕ ಅಸೋಸಿಯೇಶನ್​, ವಿ ಕೇರ್​ ಫೌಂಡೇಷನ್​, ವಸುಂಧರಾ ಫೌಂಡೇಷನ್​ ಸಹಯೋಗದಲ್ಲಿ ರನ್​ ಫಾರ್​ ನೇಚರ್​ 4.0 ಜಾಗೃತಿ ಓಟ ಹಾಗೂ ಸಮಾರಂಭ ಜೂನ್​ 7ರಂದು ತೋಳನಕೆರೆ ಉದ್ಯಾನದ ಬಳಿ ಏರ್ಪಡಿಸಲಾಗಿದೆ ಎಂದು ಅಸೋಸಿಯೇಶನ್​ ಅಧ್ಯಕ್ಷ ಚನ್ನು ಹೊಸಮನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿವರ್ಷ ಪರಿಸರ ಸಂರಕ್ಷಣೆಗಾಗಿ ರನ್​ ಆಯೋಜಿಸುತ್ತ ಬರಲಾಗಿದೆ. ವಿವಿಧ ಸಂಘ ಸಂಸ್ಥೆಗಳು ಈ ಕಾರ್ಯಕ್ಕೆ ಕೈಜೋಡಿಸಿವೆ. ಈ ವರ್ಷ ಓಟದಲ್ಲಿ 2 ಸಾವಿರಕ್ಕೂ ಹೆಚ್ಚು ಪರಿಸರ ಪ್ರೇಮಿ ವಿದ್ಯಾರ್ಥಿಗಳು ಹಾಗೂ ನಾಗರಿಕರು ಭಾಗವಹಿಸಲಿದ್ದಾರೆ ಎಂದರು.
40ಕ್ಕೂ ಹೆಚ್ಚು ಶಾಲೆ, ಕಾಲೇಜಿಗೆ ಭೇಟಿ ಮಾಡಿ ರನ್​ನಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಲಾಗಿದೆ. ಕ್ರೀಡಾಪಟುಗಳು, ಆಸಕ್ತರಿಗೆ ಜಾಗೃತಿ ಓಟವು ಉತ್ತಮ ಅವಕಾಶ ನೀಡುವುದರ ಜತೆಗೆ ಪ್ರಕೃತಿ ರಕ್ಷಿಸುವ, ಬೆಳೆಸುವ ನ ಉದ್ದೇಶಕ್ಕೆ ಪ್ರೇರಣೆ ನೀಡಲಿದೆ ಎಂದರು.
7ರಂದು ಬೆಳಗ್ಗೆ 6.30ಕ್ಕೆ 3ಕೆ ಹಾಗೂ 5ಕೆ ರನ್​ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ "ಮನೆಗೊಂದು ಮಾವಿನ ಮರ' ಅಭಿಯಾನಕ್ಕೂ ಚಾಲನೆ ನೀಡಲಾಗುತ್ತಿದ್ದು, ಒಟ್ಟು 10 ಸಾವಿರ ಸಸಿಗಳನ್ನು ಉಚಿತವಾಗಿ ವಿತರಿಸುವ ಗುರಿ ಹೊಂದಲಾಗಿದೆ. ಕಾರ್ಯಕ್ರಮದ ದಿನ 2ಸಾವಿರಕ್ಕೂ ಹೆಚ್ಚು ಮಾವಿನ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು. ಉಳಿದ 8 ಸಾವಿರ ಸಸಿಗಳನ್ನು ಆಗಸ್ಟ್​ 30ರ ವರೆಗೆ ಹಂತ ಹಂತವಾಗಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ರನ್​ ಮುಗಿದ ನಂತರ ಬೆಳಗ್ಗೆ 8ಕ್ಕೆ ಪರಿಸರ ಜಾಗೃತಿ ಸಮಾರಂಭ ನಡೆಯಲಿದ್ದು, ಸಾನ್ನಿಧ್ಯವನ್ನು ಶ್ರೀವಾಲಿ ಗುರುಗಳು ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಉದ್ಯಮಿ ಎಸ್​.ಸಿ. ಶೆಟ್ಟರ, ಪುರುಷೋತ್ತಮ ನಾರಾಯಣ ಗಾಡ್ಗೀಳ ಭಾಗವಹಿಸುವರು ಎಂದು ಹೇಳಿದರು.