rudrabhisheka ರುದ್ರಾಭಿಷೇಕ ಮಹಾಪೂಜೆ ಮಂಗಳವಾರ ಸಂಪನ್ನ
ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಶ್ರೀ ರಂಭಾಪುರಿ ಜಗದ್ಗುರು ವೀರ ಗಂಗಾಧರ ಸಮುದಾಯ ಭವನದ rudrabhisheka ಆವರಣದಲ್ಲಿರುವ ಶ್ರೀಜಗದ್ಗುರು ರೇಣುಕಾಚಾರ್ಯರಿಗೆ ಶ್ರಾವಣ ಮಾಸ ಪರ್ಯಂತ ನಡೆಸಿದ್ದ ರುದ್ರಾಭಿಷೇಕ ಮಹಾಪೂಜೆ ಮಂಗಳವಾರ ಸಂಪನ್ನಗೊಂಡಿತು.
ಕರ್ನಾಟಕ ವಿವಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಡಾ. ಮಹೇಶ ಹೊರಕೇರಿ ಮಾತನಾಡಿ, ಸಾರ್ವಜನಿಕರು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮರೆಯಬಾರದು. ಆಚಾರ-ವಿಚಾರಗಳ ಪಾಲನೆಯಿಂದ ನಮ್ಮ ದೇಶ ಪ್ರಪಂಚದಲ್ಲಿಯೇ ಉತ್ಕೃಷ್ಟವಾಗಿದೆ ಎಂದರು.
ಜಾನಪದ ತಜ್ಞ ಡಾ. ರಾಮು ಮೂಲಗಿ ಅವರು ಹಾಡುಗಳನ್ನು ಹಾಡಿದರು.
ಇದೇ ವೇಳೆ ಮಹಾನಗರ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ನೇಮಕವಾದ ಸದಾನಂದ ಡಂಗನವರ, ಗ್ರಾಮೀಣ ಜಿಲ್ಲಾಧ್ಯಕ್ಷ ಚಂದ್ರಶೇಖರ ಜುಟ್ಟಲ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗದಗಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.
ಶ್ರೋ ಜಗದ್ಗುರು ರಂಭಾಪುರೀಷ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಅಧ್ಯಕ್ಷತೆ ವಹಿಸಿದ್ದರು.
ರೈಲ್ವೆ ಇಲಾಖೆ ಕನ್ನಡ ಸಂಘದ ಅಧ್ಯಕ್ಷ ಶಿವಕುಮಾರ, ಅನುರಾಗ ಸಂಗಮ ಸಂಸ್ಥೆಯ ಅಧ್ಯಕ್ಷ ಬಸವರಾಜ ಸಜ್ಜನ, ಡಾ.ಎಸ್.ವಿ. ಹಿರೇಮಠ, ಪ್ರೊ. ಶಿವಪ್ರಕಾಶ ಬಳಿಗಾರ, ಎಸ್.ಸಿ. ಕಮ್ಮಾರ, ಪಂಚಲಿಂಗಪ್ಪ ಕವಲೂರ, ಬಸವರಾಜ ಸುಳ್ಯದ, ಶಿವಾನಂದ ಬೆಂಗೇರಿ, ರಾಮನಗೌಡರ, ಎಂ.ಬಿ. ಪೂಜಾರ, ಮಲ್ಲನಗೌಡ ಪಾಟೀಲ, ಆರ್.ಎಂ. ಹಿರೇಮಠ, ಸುಮಂಗಲಾ ಹಿರೇಮಠ ಇತರರಿದ್ದರು.