rotary school ಹುಬ್ಬಳ್ಳಿಯ ಆದರ್ಶ ನಗರದ ಡಾ. ಜಿ.ವಿ.ಜೋಶಿ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಗುರುವಾರ ಇಂಟ್ರ್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ ಜರುಗಿತು. 
ಧಾರವಾಡ

rotary school ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಹುಬ್ಬಳ್ಳಿ: ರೋಟರಿ ಕ್ಲಬ್ ಹುಬ್ಬಳ್ಳಿ ವತಿಯಿಂದ ಇಲ್ಲಿಯ ಆದರ್ಶ ನಗರದ ಡಾ. ಜಿ.ವಿ.ಜೋಶಿ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ

rotary school

ಗುರುವಾರ ಇಂಟ್ರ್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ ಏರ್ಪಡಿಸಲಾಗಿತ್ತು.

2026-27ನೇ ಸಾಲಿನ ಕ್ಲಬ್ ಅಧ್ಯಕ್ಷ ಮನಾಹ ಜೈನ್ ಮತ್ತು ಕಾರ್ಯದರ್ಶಿ ಖುಶಿ ಗುಗ್ಗರಿ ಅವರಿಗೆ ಮಾಜಿ ಅಧ್ಯಕ್ಷ ಶಿವರಾಮ ಹೆಗ್ಡೆ ಪ್ರತಿಜ್ಞಾವಿಧಿ ಬೋಧಿಸಿ ಅಧಿಕಾರ ಹಸ್ತಾಂತರಿಸಿದರು.
ಪುರನ್ ಕನ್ವರ್ ಖಿಚಿ, ಸ್ಫೂರ್ತಿ ಶೆಟ್ಟಿ, ಶ್ರದ್ಧಾ ವಿಭೂತಿ, ಪೂನಂ ರಾಥೋಡ್, ಪ್ರಮುಖ ಹುದ್ದೆಗಳಿಗೆ ನೆಹಾ ಬಾಕಳೆ, ಸೋಫಿ ಗೋಲಂದಜ್, ಸೈನಾ ಶೆಟ್ಟರ್, ತ್ರಿಶಾ ಕೊಂಡಗುಲಿ, ನೀವ್ ಭುರತ್, ಸಂಕಲ್ಪ ಜಲಿಸತ್ಗಿ ಆಯ್ಕೆ ಮಾಡಲಾಯಿತು.
ಎನ್‌ಎಲ್‌ಇ ಸೊಸೈಟಿ ಕಾರ್ಯದರ್ಶಿ ರಾಜಾ ದೇಸಾಯಿ, ಸಹ ಕಾರ್ಯದರ್ಶಿ ಸದಾನಂದ ಕಾಮತ, ಕ್ಲಬ್ ಅಧ್ಯಕ್ಷ ಎಸ್.ವಿ. ಕಡಬಿ, ಮುಖ್ಯೋಪಾಧ್ಯಾಯ ವಿಶಾಲ್ ಬಿನ್ನಾಲ್, ಮನೋಹರ ಕಮ್ಮಾರ, ಅಕ್ಷಯ ಮೆಹರವಾಡೆ ಇತರರಿದ್ದರು.