"ರೋಟರಿ ಪಿಂಕ್ ಆಟೋ'ಗೆ ಜಿಲ್ಲಾಧಿಕಾರಿಯಿಂದ ಚಾಲನೆ
ಧಾರವಾಡ: ರೋಟರಿ ಕ್ಲಬ್ ಆಫ್ ಸೆವನ್ ಹಿಲ್ಸ್ ಧಾರವಾಡ ಹಾಗೂ ಧಾರವಾಡ ಗುಜ್ಜಾಡಿ ಸ್ವರ್ಣ ಜುವೆಲ್ಲರ್ಸ್ ಸಹಯೋಗದಲ್ಲಿ ಹುಬ್ಬಳ್ಳಿ& ಧಾರವಾಡದ ಮೊದಲ ರೋಟರಿ ಪಿಂಕ್ ಆಟೋವನ್ನು ಮಹಿಳೆಯರು ಮತ್ತು ವಿದ್ಯಾಥಿರ್ನಿಯರ ಸೇವೆಗೆ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ. ಸ್ನೇಹಲ್ ಆರ್. ಮಾತನಾಡಿ, ಮಹಿಳಾ ಸುರಕ್ಷತೆ ಹಾಗೂ ಸಬಲೀಕರಣಕ್ಕಾಗಿ ರೋಟರಿ ಕ್ಲಬ್ ಕೈಗೊಂಡಿರುವ ಈ ವಿಶಿಷ್ಟ ಯೋಜನೆ ಶ್ಲಾನೀಯ. ಸಮಾಜಮುಖಿ ಸಂಸ್ಥೆಗಳು ಒಂದೇ ಉದ್ದೇಶದೊಂದಿಗೆ ಕೈ ಜೋಡಿಸಿದಾಗ ಸಮಾಜದಲ್ಲಿ ಅರ್ಥಪೂರ್ಣ ಹಾಗೂ ಶಾಶ್ವತ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಯೋಜನೆ ಅಧ್ಯೆ ರೋಟೇರಿಯನ್ ಡಾ. ಪಲ್ಲವಿ ದೇಶಪಾಂಡೆ ಮಾತನಾಡಿ, ಎರಡು ವರ್ಷಗಳಿಂದ ಕಂಡಿದ್ದ ಈ ಕನಸಿನ ಯೋಜನೆ ನನಸಾಗಿದೆ. ಗುಜ್ಜಾಡಿ ಸ್ವರ್ಣ ಜುವೆಲ್ಲರ್ಸ್ ಅವರ ಉದಾರ ಸಹಕಾರದಿಂದ ಈ ಯೋಜನೆ ಯಶಸ್ವಿಯಾಗಿದೆ ಎಂದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಿಳೆಯರಿಗೆ ಆಟೋ ಚಾಲನಾ ತರಬೇತಿ ನೀಡಿ, ಹೆಚ್ಚಿನ ರೋಟರಿ ಪಿಂಕ್ ಆಟೋಗಳನ್ನು ಪರಿಚಯಿಸುವ ಮೂಲಕ ಈ ಯೋಜನೆ ವಿಸ್ತರಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಗುಜ್ಜಾಡಿ ಸ್ವರ್ಣ ಜುವೆಲ್ಲರ್ಸ್ನ ಅಸೋಸಿಯೇಟ್ ಡೈರೆಕ್ಟರ್ ಗುರುದತ್ತ ನಾಯಕ ಮಾತನಾಡಿ, ಸಮಾಜಮುಖಿ ಯೋಜನೆಗಳಲ್ಲಿ ರೋಟರಿ ಕ್ಲಬ್ನೊಂದಿಗೆ ಕೈ ಜೋಡಿಸಿರುವುದು ಸಂತಸ ತಂದಿದೆ. ಇಂತಹ ಜನಪರ ಕಾರ್ಯಗಳಿಗೆ ಮುಂದೆಯೂ ತಮ್ಮ ಸಂಸ್ಥೆಯ ಸಂಪೂರ್ಣ ಸಹಕಾರ ಮುಂದುವರಿಯಲಿದೆ ಎಂದು ಹೇಳಿದರು.
ರೋಟೇರಿಯನ್ ಡಾ. ದೃಷ್ಟಿ ದೇಶಪಾಂಡೆ, ಮಾಜಿ ಜಿಲ್ಲಾ ಗವರ್ನರ್ ಡಾ. ರಾಜನ್ ದೇಶಪಾಂಡೆ, ರೋಟೇರಿಯನ್ ರವಿ ದೇಶಪಾಂಡೆ ಹಾಗೂ ರೋಟೇರಿಯನ್ ಗಣೇಶ್ ಭಟ್, ಫಲಾನುಭವಿ ಮಂಜುಳಾ, ಹಿರಿಯ ರೋಟೇರಿಯನ್ಗಳು, ರೋಟರಿ ಕ್ಲಬ್ ಆಫ್ ಸೆವನ್ ಹಿಲ್ಸ್ ಸದಸ್ಯರು ಹಾಗೂ ಉತ್ತರ ಕರ್ನಾಟಕ ಆಟೋ ಅಸೋಸಿಯೇಷನ್ನ ಪ್ರತಿನಿಧಿಗಳು ಇದ್ದರು.