ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ರೋಟರಿ ಕ್ಲಬ್ ಆಫ್ ಫಿನಿಕ್ಸ್‌ನ rotary finix ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. 
ಧಾರವಾಡ

rotary finix ಡಾ. ಅಮಿತ್ ರೋಟರಿ ಕ್ಲಬ್ ಆಫ್ ಫಿನಿಕ್ಸ್ ಅಧ್ಯಕ್ಷ

ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಫಿನಿಕ್ಸ್‌ನ rotary finix ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಇಲ್ಲಿಯ ಗೋಕುಲ ರಸ್ತೆಯ ಓಯಾಸಿಸ್ ಸೂಟ್ಸ್‌ನಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಡಾ. ಅಮಿತ್ ಬ್ಯಾತ್ನಾಳ (ಅಧ್ಯಕ್ಷ), ಶನೂನ್ ಮಿರ್ಜಂಕರ್ (ಕಾರ್ಯದರ್ಶಿ), ಡಾ. ಭರತ್ ಅಂಗಡಿ (ಖಜಾಂಚಿ), ಕಿರಣ ಜೋಶಿ, ಭುವನಾ ಪ್ರಶಾಂತ (ಸದಸ್ಯರು) ಅಧಿಕಾರ ಸ್ವೀಕರಿಸಿದರು. ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಿರಣ್ ಕಣವಿ ಹಾಗೂ ಡಾ. ಸ್ಮಿತಾ ಪಾಟೀಲ ಅವರನ್ನು ಸಮಾಜಮುಖಿ ಸೇವೆಗಾಗಿ ಸನ್ಮಾನಿಸಲಾಯಿತು.
ಆಶಾ ಕಾರ್ಯಕರ್ತೆಯರಿಗೆ ಛತ್ರಿಗಳನ್ನು ವಿತರಿಸಲಾಯಿತು. ಸೋನಾಲಿ ನೀಲಗುಂದ ಅಧ್ಯಕ್ಷತೆ ವಹಿಸ್ದಿರು.
ಜಿಲ್ಲಾ ಗವರ್ನರ್ ಡಾ. ಲೆನ್ನಿಡಾ ಕೋಸ್ಟಾ, ಮಾಜಿ ಜಿಲ್ಲಾ ಗವರ್ನರ್ ಡಾ. ಮಹೇಶ ರಾಯ್ಕರ್, ಸಹಾಯಕ ಜಿಲ್ಲಾ ಗವರ್ನರ್ ನೀಪಾ ಮೆಹ್ತಾ, ಮಾಜಿ ಅಧ್ಯಕ್ಷ ಸಂತೋಷ ಪೂಜಾರಿ, ಜಂಟಿ ಕಾರ್ಯದರ್ಶಿ ಜಾಸ್ಮಿನ್ ಥಾಮಸ್, ಇತರರಿದ್ದರು.
ಡಾ. ಪ್ರಿಸೆಲ್ಲಾ ಥಾಮಸ್ ಮತ್ತು ಆಶಾ ನಾದಾಫ್ ನಿರೂಪಿಸಿದರು.