Rotary ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ಟೌನ್ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಿಡಿಜಿ ನಾಸಿರ್ ಬೊರ್ಸದ್ವಾಲಾ, ನಾಗರಾಜ ಶೆಟ್ಟಿ, ನೂತನ ಅಧ್ಯಕ್ಷ ಸಂಜಯ ಕುನ್ನತ ಹಾಗೂ ಇತರರಿದ್ದಾರೆ.
ಹುಬ್ಬಳ್ಳಿ :
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ಟೌನ್ನ 2026-27ನೇ ಸಾಲಿನ ನೂತನ ಅಧ್ಯಕ್ಷ ಸಂಜಯ ಕುನ್ನತ ನೇತೃತ್ವದ ತಂಡದ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಸೇವೆಯ ಮೂಲಕ ದೇವರಿಗೆ ಪ್ರಿಯವಾದ ಕೆಲಸವನ್ನು ಮಾಡಿ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ತಿಳಿಸಿದರು.
ಅಸಿಸ್ಟಂಟ್ ಗರ್ವನರ್ ರೋಟೇರಿಯನ್ ನಾಗರಾಜ ಶೆಟ್ಟಿ ಮಾತನಾಡಿ, ರೋಟರಿಯ ಸದಸ್ಯರು ತಂಡವಾಗಿ ಕೆಲಸ ಮಾಡಿದರೆ ಅದ್ಭುತಗಳನ್ನು ಸಾಧಿಸಬಹುದು ಎಂದರು.
ನೂತನ ಅಧ್ಯಕ್ಷರಾಗಿ ಸಂಜಯ ಕುನ್ನತ, ಕಾರ್ಯದರ್ಶಿಯಾಗಿ ಯೋಗೇಶ ಕುಂಭಕೋಣಂ, ಖಜಾಂಚಿಯಾಗಿ ಅಲೋಕ ಅಂಕಲಿಕರ, ನಿರ್ಗಮನ ಅಧ್ಯಕ್ಷ ಗುಲ್ಜಾರ್ ಅಹಮದ್, ಕೌಸ್ತುಭ ಸಂಶೀಕರ , ಡಾ. ಪ್ರಕಾಶ ವಾರಿ, ದಿನೇಶ ಶೆಟ್ಟಿ, ರಾಜು ದೊಡ್ಡಮನಿ, ಪ್ರವೀಣ ಭನ್ಸಾಲಿ, ಪ್ರದೀಪ ಶೆಟ್ಟಿ, ಇಮ್ಯಾನುಲ್, ಅಭಿಜಿತ್, ಭೂಪೇಂದ್ರ ಸಕಾರಿಯಾ, ರೋಹಿತ ಬೈದ, ಆನಂದ ಸಿಂಗ್ ಮೊಕಾಶಿ, ಪ್ರಶಾಂತ ಹೆಬಸೂರ, ಪ್ರಕಾಶ ಕೊನ್ನೂರು, ಉಮೇಶ ಕುಂಚುನೂರ, ಶಿವಪ್ರಸಾದ ಲಕಮನಹಳ್ಳಿ, ಗುರು, ಡಾ. ನಾಗರಾಜ ನಾಯ್ಕ, ವಿಠಲ ಸಂಗೋಜಿಯವರು ಪದಗ್ರಹಣ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ವೈದ್ಯರು ಹಾಗೂ ಸಿಎ ಅವರನ್ನು ಸನ್ಮಾನಿಸಲಾಯಿತು. ಮುಕೇಶ ಪಾಂಚಾಲ, ಅರುಣ ಅಗಡಿ ಮತ್ತು ಪ್ರದೀಪ ಶೆಟ್ಟಿ ನಿರೂಪಿಸಿದರು.