rotary champion ಗೋವಾದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ. ಎನ್​.ಎ. ಚರಂತಿಮಠ ಅವರಿಗೆ ನ್ಯಾಷನಲ್​ ರೋಟರಿ ಚಾಂಪಿಯನ್​ ಗೌರವ ನೀಡಲಾಯಿತು. 
ಧಾರವಾಡ

rotary champion ಡಾ. ಚರಂತಿಮಠಗೆ ರೋಟರಿ ಗೌರವ

ಪ್ರಮುಖ ಮುಖ್ಯಾಂಶಗಳು

  • ಸಮಾಜ ಸೇವೆ ಸಾಧನೆಗಳ ಕಿರೀಟಕ್ಕೆ ಮತ್ತೊಂದು ಗರಿ
  • ಗೋವಾದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗೌರವ ಪ್ರದಾನ

ಹುಬ್ಬಳ್ಳಿ: rotary champion ಇಲ್ಲಿಯ ಐಇಎಂಎಸ್​ ಬಿ ಸ್ಕೂಲ್​ ಅಧ್ಯಕ್ಷ ಸಿಎ ಡಾ. ಎನ್​.ಎ. ಚರಂತಿಮಠ ಅವರು ರೋಟರಿ ಇಂಟರ್​ನ್ಯಾಷನಲ್​ನ ಪ್ರತಿಷ್ಠಿತ "ನ್ಯಾಷನಲ್​ ರೋಟರಿ ಚಾಂಪಿಯನ್​' ಗೌರವ ಪಡೆದಿದ್ದಾರೆ.

ಗೋವಾದ ಪಣಜಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರೋಟರಿ ಇಂಟರ್​ನ್ಯಾಷನಲ್​ ಅಧ್ಯಕ್ಷರಾದ ಒಲಯಿಂಕಾ ಹಕೀಮ್​ ಬಬಲೋಲಾ ಅವರು ಡಾ. ಚರಂತಿಮಠ ಅವರಿಗೆ ಗೌರವ ಪ್ರದಾನ ಮಾಡಿದರು.
ರೋಟರಿ ಸಂಸ್ಥೆಯ ಮೂಲಕ ಸಮಾಜಕ್ಕೆ ನೀಡಿದ ಉತ್ತಮ ಸೇವೆ ಮತ್ತು ಹಲವು ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
ಉತ್ತರ ಕರ್ನಾಟಕ, ಗೋವಾ ಮತ್ತು ದಕ್ಷಿಣ ಮಹಾರಾಷ್ಟ್ರ ಪ್ರದೇಶಗಳಿಂದ ಐದು ಜನರನ್ನುಈ ಪ್ರತಿಷ್ಠಿತ ಗೌರವಕ್ಕೆ ಆಯ್ಕೆ ಮಾಡಲಾಗಿದ್ದು, ಅವರಲ್ಲಿ ಡಾ. ಚರಂತಿಮಠ ಒಬ್ಬರಾಗಿರುವುದು ಹೆಮ್ಮೆಯ ಸಂಗತಿ.
ಇದು ಅವರ ಸೇವಾ ಮನೋಭಾವ, ಉತ್ತಮ ನಾಯಕತ್ವ ಮತ್ತು ಸಮಾಜದ ಬಗ್ಗೆ ಇರುವ ಕಾಳಜಿಗೆ ದೊರೆತ ಗೌರವವಾಗಿದೆ. ಈ ಸಾಧನೆಗೆ ಐಇಎಂಎಸ್​ ಬಿ ಸ್ಕೂಲ್​ ಕುಟುಂಬವು ಸಂತಸ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ.