rotary campaign ಹುಬ್ಬಳ್ಳಿಯ ನವನಗರ ಇಂದ್ರಪ್ರಸ್ಥ ನಗರದ ರೋಟರಿ ಇಂಗ್ಲಿಷ್​ ಮೀಡಿಯಂ ಸ್ಕೂಲ್​ ಆವರಣದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಡಾ. ವಿಜಯಶ್ರೀ ಕಲಬುರ್ಗಿ, ಬಸವರಾಜ ಕಾಕೋಳ, ಜಯಂತ ಗಾಡ್ಗೀಳ ಇತರರು ಇದ್ದರು. 
ಧಾರವಾಡ

rotary campaign ರೋಟರಿ ಸ್ಕೂಲ್​ನಲ್ಲಿ ಪರಿಸರ ಜಾಗೃತಿ ಅಭಿಯಾನ

ಹುಬ್ಬಳ್ಳಿ: rotary campaign ನವನಗರದ ಇಂದ್ರಪ್ರಸ್ಥ ನಗರದಲ್ಲಿ ಹೊಸದಾಗಿ ಪ್ರಾರಂಭಿಸಿರುವ ರೋಟರಿ ಇಂಗ್ಲಿಷ್​ ಮೀಡಿಯಂ ಸ್ಕೂಲ್​ (ಸಿಬಿಎಸ್​ಇ) ಆವರಣದಲ್ಲಿ ನವನಗರ ಸ್ಪೋರ್ಟ್ಸ್​ ಆಂಡ್​ ಕಲ್ಚರಲ್​ ಅಕಾಡೆಮಿ (ಎನ್​ಎಸ್​ಸಿಎ) ವತಿಯಿಂದ ಇತ್ತೀಚೆಗೆ ಗಿಡ ನೆಡುವ ಕಾರ್ಯಕ್ರಮದ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಪ್ರಾಸ್ತಾವಿಕ ಮಾತನಾಡಿದ ಎನ್​ಎಸ್​ಸಿಎ ಅಧ್ಯಕ್ಷೆ ಡಾ. ವಿಜಯಶ್ರೀ ಕಲಬುರ್ಗಿ ಅವರು, ಪರಿಸರ ಸಂರಕ್ಷಣೆಯ ಮಹತ್ವವನ್ನು ವಿವರಿಸಿದರು. ಶಾಲಾ ಆವರಣದಲ್ಲಿ ಕೆಲವು ಸಸಿಗಳನ್ನು ನೆಡುವ ಮೂಲಕ ಅಧಿಕೃತವಾಗಿ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಹಸಿರು ಉಪಕ್ರಮದಲ್ಲಿ ಎನ್​ಎಸ್​ಸಿಎ ಪದಾಧಿಕಾರಿಗಳು ಮತ್ತು ಸದಸ್ಯರು ಉತ್ಸಾಹದಿಂದ ಭಾಗವಹಿಸಿದ್ದರು. ನವನಗರ ಹಾಗೂ ಸುತ್ತಲಿನ ಪರಿಸರದಲ್ಲಿ ಹಸಿರು ಬೆಳೆಸುವ ಸಂಕಲ್ಪ ಮಾಡಲಾಯಿತು. ಅಕಾಡೆಮಿ ವತಿಯಿಂದ ಇನ್ನಷ್ಟು ಕಡೆಗಳಲ್ಲಿ ಅಭಿಯಾನ ನಡೆಸುವ ಉದ್ದೇಶವಿದೆ ಎಂದು ತಿಳಿಸಲಾಯಿತು.