ಹುಬ್ಬಳ್ಳಿ ಯಂಗ್ ಇಂಡಿಯನ್ಸ್‌ನಿಂದ ಹೊಸೂರು ಕ್ರಾಸ್‌ನಲ್ಲಿರುವ ಎಂ.ಎಂ. ಜೋಶಿ ಆಸ್ಪತ್ರೆ ಬಳಿ ಭಾನುವಾರ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಮೂಡಿಸುವ ಸೈಕಲ್ ರ‌್ಯಾಲಿಗೆ ಉತ್ತರ ಸಂಚಾರ ಎಸಿಪಿ ವೀರೇಶ ಚಾಲನೆ ನೀಡಿದರು. ಡಾ. ಸಮೀರ, ಮಂಗಳವೇಡೆ, ಡಾ. ದೀಪ್ತಿ ಜೋಶಿ, ಉಜ್ವಲ್ ಸಿಂಘಿ, ಸೌರಭ ಧರಣಪ್ಪನವರ, ಲೇಖಾ ಖೋನಾ, ಶ್ರೀನಿಕೇತ ಸಿಂಗ್ಹಾನಿಯಾ, ಇತರರಿದ್ದರು.
- ಹು-ಧಾ ಉತ್ತರ ಸಂಚಾರ ಎಸಿಪಿ ವೀರೇಶ ಸಲಹೆ
- ಹುಬ್ಬಳ್ಳಿ ಯಂಗ್ ಇಂಡಿಯನ್ಸ್‌ನಿಂದ ಸೈಕಲ್ ರ‌್ಯಾಲಿ
ಹುಬ್ಬಳ್ಳಿ: ರಸ್ತೆ ಸುರಕ್ಷತಾ ವಾರದ ಅಂಗವಾಗಿ ಯಂಗ್ ಇಂಡಿಯನ್ಸ್ ವತಿಯಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾನುವಾರ ಸೈಕಲ್ ರ‌್ಯಾಲಿ ಆಯೋಜಿಸಲಾಗಿತ್ತು.
ಹೊಸೂರು ಕ್ರಾಸ್‌ನಲ್ಲಿರುವ ಎಂ.ಎಂ. ಜೋಶಿ ಆಸ್ಪತ್ರೆಯಿಂದ ಆರಂಭಗೊಂಡ ರ‌್ಯಾಲಿಯು ಬಿವಿಬಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಸಮಾಪ್ತಿಯಾಯಿತು. ರ‌್ಯಾಲಿಯಲ್ಲಿ 7ನೇ ತರಗತಿಯಿಂದ 10ನೇ ತರಗತಿವರೆಗಿನ ಸುಮಾರು 500 ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.
ಹು-ಧಾ ಉತ್ತರ ಸಂಚಾರ ಎಸಿಪಿ ವೀರೇಶ, ಕೆಎಲ್‌ಇ ತಾಂತ್ರಿಕ ವಿವಿ ಡೀನ್ ಪ್ರೊ. ಸಂಜಯ ಕೊಟಬಾಗಿ ಮಾತನಾಡಿ, ರಸ್ತೆ ನಿಯಮಗಳ ಪಾಲನೆ, ಸುರಕ್ಷಿತ ಸೈಕ್ಲಿಂಗ್ ಪದ್ಧತಿ, ಹೆಲ್ಮೆಟ್ ಬಳಕೆ ಹಾಗೂ ರಸ್ತೆ ಅಪಘಾತ ತಡೆಯಲು ನಾಗರಿಕರು ರಸ್ತೆ ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.
ಯಂಗ್ ಇಂಡಿಯನ್ಸ್ ಹುಬ್ಬಳ್ಳಿ ತಂಡದ ಡಾ. ಸಮೀರ, ಮಂಗಳವೇಡೆ, ಡಾ. ದೀಪ್ತಿ ಜೋಶಿ, ಉಜ್ವಲ್ ಸಿಂಘಿ, ಸೌರಭ ಧರಣಪ್ಪನವರ, ಲೇಖಾ ಖೋನಾ, ಶ್ರೀನಿಕೇತ ಸಿಂಗ್ಹಾನಿಯಾ, ನವೀನ ಜೈನ, ಪಾಯಲ್ ಮಹಾಜನ, ಆಶೀಷ ಮಹಾಜನ, ಸೋನಿಯಾ ಸಿಂಗ್ಹಾನಿಯಾ, ಹುಬ್ಬಳ್ಳಿ ಬೈಸಿಕಲ್ ಕ್ಲಬ್‌ನ ಶೆಟ್ಟೆಪ್ಪ ಫಿರಂಗಿ, ಶಿವಾನಂದ ದಂಡಾವತಿಮಠ, ಸಿದ್ದು ಕುಬಳ್ಳಿ ಪಾಲ್ಗೊಂಡಿದ್ದರು.
ಬಹುಮಾನ ವಿತರಣೆ: ಅತ್ಯುತ್ತಮವಾಗಿ ಅಲಂಕರಿಸಿದ ಸೈಕಲ್, ರಸ್ತೆ ಸುರಕ್ಷತಾ ಘೋಷವಾಕ್ಯ, ಅತ್ಯಧಿಕ ವಿದ್ಯಾರ್ಥಿಗಳು ಭಾಗವಹಿಸಿದ ಶಾಲೆಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.