road safety ಹುಬ್ಬಳ್ಳಿಯ ಕೆಎಲ್​ಇ ಜೆಜಿಎಂ ಮೆಡಿಕಲ್​ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಉಪನ್ಯಾಸ ಕಾರ್ಯಕ್ರಮದಲ್ಲಿ ಆರ್​ಟಿಒ ಶ್ರೀಕಾಂತ ಬಡಿಗೇರ, ಡಾ. ಶಾರದಾ ಮೆಟಗುಡ್ಡ, ಜಿ.ವಿ. ದಿನಮಣಿ, ಎಸ್​.ಡಿ. ಬೆಲ್ಲದ, ಡಾ. ಅರುಣಕುಮಾರ ಇತರರು ಇದ್ದರು. 
ಧಾರವಾಡ

road safety ಮೆಡಿಕಲ್​ ಕಾಲೇಜಿನಲ್ಲಿ ರಸ್ತೆ ಸುರಕ್ಷತೆ ಉಪನ್ಯಾಸ

ಹುಬ್ಬಳ್ಳಿ: road safety ಇಲ್ಲಿಯ ಗಬ್ಬೂರ ಕೆಎಲ್​ಇ ಜೆ.ಜಿ.ಎಂ ಮೆಡಿಕಲ್​ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆ ಅಂಗವಾಗಿ ವೈದ್ಯ ವಿದ್ಯಾರ್ಥಿಗಳು, ಬೋಧಕರು, ಸಿಬ್ಬಂದಿ ಹಾಗೂ ಕಾಲೇಜು ಬಸ್​ ಚಾಲಕರಿಗೆ ಗುರುವಾರ ಉಪನ್ಯಾಸ ಏರ್ಪಡಿಸಲಾಗಿತ್ತು.
ಸಾರಿಗೆ ಇಲಾಖೆ, ಕೆಎಲ್​ಇ ಜೆ.ಜಿ.ಎಂ ಮೆಡಿಕಲ್​ ಕಾಲೇಜು, ಇಂಡಿಯನ್​ ಮೆಡಿಕಲ್​ ಅಸೋಸಿಯೇಶನ್​ ಹಾಗೂ ಐ.ಎಂ.ಎ. ಲೇಡೀಸ್​ ವಿಂಗ್​ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಕಾಂತ ಬಡಿಗೇರ ಉದ್ಘಾಟಿಸಿದರು.
ಹಿರಿಯ ಮೋಟಾರು ವಾಹನ ನಿರೀಕ್ಷಕ ಎಸ್​.ಡಿ. ಬೆಲ್ಲದ ಮಾತನಾಡಿ, ರಸ್ತೆ ಅಪಘಾತ, ಲೇನ್​ ಬದಲಾವಣೆ, ಡಿಸಿಪ್ಲೆನ್​, ಟೋಲ್​ ಗೇಟ್​ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು. ಸುರಕ್ಷತಾ ಮುಂಜಾಗ್ರತಾ ಕ್ರಮಗಳ ಕುರಿತು ವಿಡಿಯೋ ಪ್ರಾತ್ಯಕ್ಷಿತೆ ನೀಡಿದರು.ರಸ್ತೆ ಸುರಕ್ಷತೆಯ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.