ಎಪಿಎಂಸಿ ನವನಗರ ಠಾಣೆಯಲ್ಲಿ ಪ್ರಕರಣ rice fraud 
ಧಾರವಾಡ

rice fraud ಅಕ್ಕಿ ಪಡೆದು ವಂಚನೆ ಪ್ರಕರಣ

ಮರಿದೇವ ಹೂಗಾರ
ಹುಬ್ಬಳ್ಳಿ: ಬೇರೆ ರಾಜ್ಯ ಹಾಗೂ ಬೆಂಗಳೂರಿನ ಹಲವರು ನಗರದ ವ್ಯಕ್ತಿಯೊಬ್ಬರಿಂದ ಅಕ್ಕಿ rice fraud ಪಡೆದು 32 ಲಕ್ಷ ರೂ. ಗೂ ಅಧಿಕ ಹಣ ಕೊಡದೇ ವಂಚಿಸಿದ ಪ್ರಕರಣ ಇಲ್ಲಿಯ ಎಪಿಎಂಸಿ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಸ್ತಾನದ ಕೃಷ್ಣಕುಮಾರ ಪ್ರತಾಪ, ಬೆಂಗಳೂರಿನ ಶಾಆಲಮ್ ವೀರ, ವಿಕ್ರಮ ಪುರೋಹಿತ, ಸಾಗರ ಪುರೋಹಿತ, ಸೂರತ್‌ನ ಇಸ್ಮಾಯಿಲ್ ಪಠಾಣ ನಗರದ ಅರ್ಜುನ ಅಗರವಾಲ್ ಎಂಬುವವರಿಂದ ಅಕ್ಕಿ ಖರೀದಿ ಮಾಡಿದ್ದರು.
ಇವರೆಲ್ಲರೂ ಸೇರಿ ಮೋಸ ಮಾಡುವ ಉದ್ದೇಶದಿಂದ ಫೋನ್ ಮೂಲಕ ಸಂಪರ್ಕಿಸಿದ್ದರು. ಇ-ಮೇಲ್ ಮೂಲಕ ವ್ಯಾಪಾರದ ಕರಾರು ಮಾಡಿಕೊಂಡು ಸ್ವಲ್ಪ ಹಣ ಸಂದಾಯ ಮಾಡಿದ್ದರು. ನಂತರ 32 ಲಕ್ಷ ರೂ.ಗೂ ಹೆಚ್ಚು ಹಣ ಕೊಡದೇ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಅರ್ಜುನ ಅಗರವಾಲ್ ದೂರಿನಲ್ಲಿ ವಿವರಿಸಿದ್ದಾರೆ.