Voter list ಹುಬ್ಬಳ್ಳಿಯ ಬಿಜೆಪಿ ಕಚೇರಿಯಲ್ಲಿ ಭಾನುವಾರ ಮತಗಟ್ಟೆ ಅಧ್ಯಕ್ಷರು, ಪ್ರಮುಖರ ಕಾರ್ಯಾಗಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶಂಖ ಊದುವ ಮೂಲಕ ಚಾಲನೆ ನೀಡಿದರು. ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್​ ಜ್ಯೋತಿ ಪಾಟೀಲ, ಕೇಶವ ಪ್ರಸಾದ, ರಾಜಣ್ಣ ಕೊರವಿ, ಇತರರು ಇದ್ದರು. 
ಧಾರವಾಡ

Voter list ಎಸ್​ಐಆರ್​ ಇದೇ ಮೊದಲಲ್ಲ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವ ಜೋಶಿ ಹೇಳಿಕೆ
  • ಹುಬ್ಬಳ್ಳಿಯಲ್ಲಿ ಮತಗಟ್ಟೆ ಅಧ್ಯಕ್ಷರು, ಪ್ರಮುಖರ ಕಾರ್ಯಾಗಾರ
  • ತಂತ್ರಜ್ಞಾನ ಬಳಸಿ ಪರಿಷ್ಕರಣೆ
ಇಲ್ಲಿಯ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಬಿಎಲ್​ಎ 2 ಮತಗಟ್ಟೆ ಅಧ್ಯಕ್ಷರು ಹಾಗೂ ಪ್ರಮುಖರ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೊದಲೆಲ್ಲ ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆಗುತ್ತಿತ್ತು. ಅನರ್ಹರು ಪಟ್ಟಿ ಸೇರುತ್ತಿದ್ದಾರೆ ಎಂಬ ಬಗ್ಗೆ ಕೆಲವು ಕಡೆ ದೂರುಗಳು ಬಂದವು. ಇಂತಹ ದೂರುಗಳ ಆಧಾರದಲ್ಲಿ ಕೇಂದ್ರ ಚುನಾವಣಾ ಆಯೋಗ ದೇಶಾದ್ಯಂತ ಪರಿಷ್ಕರಣೆ ಮಾಡಲು ತೀರ್ಮಾನ ಕೈಗೊಂಡಿದೆ. ಇದನ್ನು ಸರ್ಕಾರ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಶುದ್ಧ ಮನಸ್ಸಿನಿಂದ ತೊಡಗಿಕೊಳ್ಳಿ: