ಮನರೇಗಾ ಕೂಲಿಕಾರರು ಶುಕ್ರವಾರ ಜಿಪಂ ಎದುರು ಪ್ರತಿಭಟನೆ ನಡೆಸಿದರು.
ಧಾರವಾಡ: ಬಾಕಿ ಇರುವ ಮನರೇಗಾ ಯೋಜನೆ ಕೂಲಿ ಹಣ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ರೈತ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮನರೇಗಾ ಕೂಲಿಕಾರರು ಶುಕ್ರವಾರ ಜಿಪಂ ಎದುರು ಪ್ರತಿಭಟನೆ ನಡೆಯಿತು.
ಬೆಲೆ ಏರಿಕೆಯಿಂದ ಕೃಷಿ ಕ್ಷೇತ್ರವು ಗಂಭೀರ ಪರಿಸ್ಥಿತಿಯಲ್ಲಿದೆ. ಗ್ರಾಮೀಣ ಜನತೆಯ ಬದುಕು ಅತಂತ್ರವಾಗಿದೆ. ಗ್ರಾಮೀಣ ಜನತೆಗೆ ಆರ್ಥಿಕ ನೆರವು ನೀಡುತ್ತಿರುವ ಮನರೇಗಾ ಇನ್ನಷ್ಟು ಬಲಿಷ್ಠಗೊಳಿಸುವ ಅವಶ್ಯಕತೆ ಇದೆ. ಮನರೇಗಾ ಯೋಜನೆಯನ್ನೇ ಮರುಸ್ಥಾಪಿಸಬೇಕು. ಗ್ರಾಮೀಣ ಜನತೆಯ ಕೆಲಸವನ್ನು ಕಸಿಯುವ ಜಿ ರಾಮ್ ಜಿ ಯೋಜನೆ ಸಂಪೂರ್ಣವಾಗಿ ಕೈ ಬಿಡಬೇಕು. ಮನರೇಗಾ ಕೂಲಿ ಹಣವನ್ನು 600 ರೂ.ಗೆ ಹೆಚ್ಚಿಸಬೇಕು ಮತ್ತು 200 ದಿನ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹಾಗೂ ಜಿಲ್ಲಾಽಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.
ದೀಪಾ ಧಾರವಾಡ, ಶರಣು ಗೋನವಾರ, ದಿವಾನ್‌ಸಾಬ ತುಮಕಿ, ಶಿವಯ್ಯ, ರೇಣುಕಾ ಇತರರಿದ್ದರು.