wellness ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ಎನ್ಎಲ್ನ ನಿವೃತ್ತ ಉಪ ಮಹಾಪ್ರಬಂಧಕ ಎನ್.ಕೆ. ಗಂದಿಗವಾಡ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಎಸ್ಎನ್ಎಲ್ನ ನಿವೃತ್ತ ಉಪ ಮಹಾಪ್ರಬಂಧಕ ಎನ್.ಕೆ. ಗಂದಿಗವಾಡ, ಇದರಿಂದ ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆ, ಸೇವೆಯಲ್ಲಿರುವ ನೌಕರರಿಗೆ ಬಿಎಸ್ಎಫ್, ಸಿಆರ್ಪಿಎಫ್ ಸೈನಿಕರಿಗೆ, ಅರೆ ಸೈನಿಕ ಪಿಂಚಣಿದಾರರಿಗೆ (ರೈಲ್ವೆ ಮತ್ತು ರಕ್ಷಣಾ ಇಲಾಖೆ ಹೊರತುಪಡಿಸಿ) ಸಾಕಷ್ಟು ಅನುಕೂಲವಾಗಲಿದೆ ಎಂದರು.
ಉತ್ತರ ಕರ್ನಾಟಕದಲ್ಲಿ ವೆಲ್ನೆಸ್ ಸೆಂಟರ್ ಇರಲಿಲ್ಲ. ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗಬೇಕಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಮೊದಲು ಹಣ ಪಾವತಿಸಿ, ನಂತರ ಮರು ಪಾವತಿಗೆ ಅರ್ಜಿ ಸಲ್ಲಿಸಬೇಕಿತ್ತು.
ಸಿಜಿಎಚ್ಎಸ್ ಯೋಜನೆಯಡಿ ಹೊರರೋಗಿ ಮತ್ತು ಒಳ ರೋಗಿಗಳಿಗೆ ಚಿಕಿತ್ಸೆಗಳು ಸಂಪೂರ್ಣ ಉಚಿತ ಸಿಗುತ್ತವೆ ಎಂದು ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪ್ರಯತ್ನದಿಂದಾಗಿ ಇಲ್ಲಿ ನಿಯಮಿತ ವೆಲ್ನೆಸ್ ಸೆಂಟರ್ ನಿರ್ವಣಗೊಂಡಿದೆ. 2022ರಲ್ಲಿ ಹುಬ್ಬಳ್ಳಿಗೆ ವೆಲ್ನೆಸ್ ಸೆಂಟರ್ ಅನ್ನು ಎಕ್ಸ್ಟೆನ್ಶನ್ ಕೌಂಟರ್ ರೂಪದಲ್ಲಿ ಮಂಜೂರು ಮಾಡಲಾಯಿತು. ಇದೀಗ, ಚಿಟಗುಪ್ಪಿ ಆಸ್ಪತ್ರೆಯ ಹೊಸ ಕಟ್ಟಡದಲ್ಲಿ ನಿಯಮಿತ ವೆಲ್ನೆಸ್ ಸೆಂಟರ್ ಆರಂಭಗೊಂಡಿದೆ ಎಂದರು.
ಹುಬ್ಬಳ್ಳಿ, ಧಾರವಾಡ, ಗದಗ ಮತ್ತು ರಾಣೆಬೆನ್ನೂರ ಶಾಖೆಗಳಲ್ಲಿ ಸಿಜಿಎಚ್ಎಸ್ ಹೊಸ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಿ, ಪಿಂಚಣಿದಾರರು ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿದರು.
ಎಸ್.ಎಲ್. ಪೂಜಾರ, ಇ.ಎಚ್. ಶಿವಾನಂದ, ಎಂ.ಎನ್. ಗೋರಪಡೆ, ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.