railway ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಗೂಡ್ಸ್ ರೈಲಿಗೆ ಸರಕು ತುಂಬುತ್ತಿರುವುದು. 
ಧಾರವಾಡ

ನೈಋತ್ಯ ರೈಲ್ವೆಗೆ ದಾಖಲೆಯ ಆದಾಯ railway

ಪ್ರಮುಖ ಮುಖ್ಯಾಂಶಗಳು

  • ಮೂಲಸೌಕರ್ಯ ಅಭಿವೃದ್ಧಿಯಲ್ಲಿಯೂ ನೈಋತ್ಯ ರೈಲ್ವೆ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.
  • 5,347.40 ಕೋಟಿಗಳ ಸರಕು ಸಾಗಣೆೆ ಆದಾಯವನ್ನು ದಾಖಲಿಸಿದೆ.
  • ಹುಬ್ಬಳ್ಳಿ ವಿಭಾಗವು 39.5 ಮಿಲಿಯನ್ ಟನ್ ಸರಕು ಸಾಗಣೆ ಸಾಧಿಸಿದೆ.
52.46 ಮಿಲಿಯನ್ ಟನ್ ಸರಕು ಸಾಗಿಸಿದ್ದು, ಇದರಿಂದ 9,488 ಕೋಟಿ ರೂ. ಆದಾಯ ಗಳಿಸಿದೆ.
ಹುಬ್ಬಳ್ಳಿ ವಿಭಾಗವು 39.5 ಮಿಲಿಯನ್ ಟನ್ ಸರಕು ಸಾಗಣೆ ಸಾಧಿಸಿ, ನೈಋತ್ಯ ರೈಲ್ವೆಯ ಅತಿ ದೊಡ್ಡ ಪಾಲನ್ನು ಹೊಂದಿದೆ.
ಮೈಸೂರು ವಿಭಾಗವು 10.59 ಮಿಲಿಯನ್ ಟನ್ ಸಾಧನೆ ಮಾಡಿದೆ. ಬೆಂಗಳೂರು ವಿಭಾಗವು 4,812 ಟಿಒಡಿ ಟ್ರಿಪ್​ಗಳನ್ನು ಯಶಸ್ವಿಯಾಗಿ ನಿರ್ವಹಿಸಿ, 99 ರೈಲುಗಳ ವೇಗವನ್ನು ಹೆಚ್ಚಿಸಿದೆ ಹಾಗೂ ಪ್ರಯಾಣಿಕರ ಆದಾಯದಲ್ಲಿ ಸುಮಾರು ಶೇ. 70ರಷ್ಟು ಕೊಡುಗೆ ನೀಡಿದೆ.
ಒಟ್ಟು 53 ರೂಟ್ ಕಿಮೀ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದೆ. 78.1 ಕಿಮೀ ಜೋಡಿ ಮಾರ್ಗ ಹಾಗೂ 24 ಕಿಮೀ ಹೊಸ ರೈಲು ಮಾರ್ಗ ಕಾಮಗಾರಿ ಈ ಅವಧಿಯಲ್ಲಿ ಪೂರ್ಣಗೊಂಡಿದೆ.ಈ ಅವಧಿಯಲ್ಲಿ ವಲಯವು 5,347.40 ಕೋಟಿಗಳ ಸರಕು ಸಾಗಣೆೆ ಆದಾಯವನ್ನು ದಾಖಲಿಸಿದ್ದು, 2024-25ರಲ್ಲಿ 4,672 ಕೋಟಿ ರೂ. ಗಳ ಹಿಂದಿನ ದಾಖಲೆಯನ್ನು ಮೀರಿಸಿದೆ.
ಒಟ್ಟು ಆದಾಯವು 8,489 ಕೋಟಿ ರೂ.ಗಳಿಂದ 9,488 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.
ಪ್ರಯಾಣಿಕರ ವಿಭಾಗದಲ್ಲಿ ಆದಾಯವು 3,172.5 ಕೋಟಿ ರೂ. ದಿಂದ 3,468 ಕೋಟಿ ರೂ.ಗೆ ಏರಿಕೆಯಾಗಿದೆ. ಪ್ರಯಾಣಿಕರ ಸಂಖ್ಯೆ 165.53 ಮಿಲಿಯನ್​ನಿಂದ 176.93 ಮಿಲಿಯನ್​ಗೆ ಹೆಚ್ಚಳವಾಗಿದೆ.
ಇದೇ ಅವಧಿಯಲ್ಲಿ ಭಾರತೀಯ ರೈಲ್ವೆಯ ಒಟ್ಟು ಸರಕು ಸಾಗಣೆ 1,615 ಮಿಲಿಯನ್ ಟನ್​ನಿಂದ 1,667.8 ಮಿಲಿಯನ್ ಟನ್​ಗೆ ಏರಿಕೆಯಾಗಿದ್ದು, ಈ ಹೆಚ್ಚುವರಿ ಸಾಗಣೆೆಯಲ್ಲಿ ನೈಋತ್ಯ ರೈಲ್ವೆ ಸುಮಾರು ಶೇ. 13ರಷ್ಟು ಕೊಡುಗೆ ನೀಡಿದೆ.
2026ರ ಮಾರ್ಚ್ 31ರ ಒಂದೇ ದಿನದಲ್ಲಿ 31 ರೇಕ್​ಗಳನ್ನು ಲೋಡ್ ಮಾಡುವ ಮೂಲಕ ಫಿನಿಶ್ಡ ಸ್ಟೀಲ್​ನಲ್ಲಿ ಹೊಸ ದಾಖಲೆ ನಿರ್ವಿುಸಲಾಗಿದ್ದು, 2025ರ 29 ರೇಕ್​ಗಳ ಹಿಂದಿನ ದಾಖಲೆಯನ್ನು ಮೀರಿಸಲಾಗಿದೆ.
ಮೂಲಸೌಕರ್ಯ ಅಭಿವೃದ್ಧಿಯಲ್ಲಿಯೂ ನೈಋತ್ಯ ರೈಲ್ವೆ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಈ ವರ್ಷದಲ್ಲಿ 53 ರೂಟ್ ಕಿಲೋಮೀಟರ್ ವಿದ್ಯುದೀಕರಣ ಪೂರ್ಣಗೊಂಡಿದ್ದು, ಒಟ್ಟು ವಿದ್ಯುದೀಕೃತ ಮಾರ್ಗದ ಉದ್ದ 3,339 ಕಿಮೀ ಆಗಿದೆ.
ಇದರ ಜೊತೆಗೆ, 24 ಕಿಲೋಮೀಟರ್ ಹೊಸ ರೈಲ್ವೆ ಮಾರ್ಗಗಳನ್ನು ಪ್ರಾರಂಭಿಸಲಾಗಿದ್ದು, 78.1 ಕಿಲೋಮೀಟರ್ ಡಬಲ್ ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಇದರಿಂದ ಸಾಮರ್ಥ್ಯ ಹೆಚ್ಚಳ ಮತ್ತು ಸಂಪರ್ಕ ಸುಧಾರಣೆ ಸಾಧ್ಯವಾಗಿದೆ.
ಸರಕು ಸಾಗಣೆ, ಆದಾಯ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಾಧಿಸಿದ ಈ ಯಶಸ್ಸುಗಳು ನೈಋತ್ಯ ರೈಲ್ವೆಯ ಶ್ರೇಷ್ಠತೆ ಮತ್ತು ದಕ್ಷತೆಗೆ ಬದ್ಧತೆಯನ್ನು ತೋರಿಸುತ್ತವೆ.