cargo ಗೂಡ್ಸ್ ಟ್ರೇನ್ 
ಧಾರವಾಡ

ಜುಲೈನಲ್ಲಿ ದಾಖಲೆಯ ಸರಕು ಸಾಗಣೆ cargo

ಆನಂದಕುಮಾರ ಅಂಗಡಿ

ಪ್ರಮುಖ ಮುಖ್ಯಾಂಶಗಳು

  • ನೈಋತ್ಯ ರೈಲ್ವೆಯಿಂದ 4.69 ಮಿಲಿಯನ್ ಟನ್ ಗೂಡ್ಸ್ ಟ್ರಾನ್ಸಪೋರ್ಟ್
  • 2025ರ ಜುಲೈನಲ್ಲಿ 4.2 ಮಿಲಿಯನ್ ಟನ್ ಸಾಗಿಸಲಾಗಿತ್ತು.
  • ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 11.7ರಷ್ಟು (0.49 ಮಿಲಿಯನ್ ಟನ್) ಹೆಚ್ಚು ಸರಕು ಸಾಗಿಸಲಾಗಿದೆ.
ಇದೇ ಜುಲೈನಲ್ಲಿ ನೈಋತ್ಯ ರೈಲ್ವೆಯು 4.69 ಮಿಲಿಯನ್ ಟನ್ ಸರಕು ಸಾಗಣೆ ಸಾಗಿಸಿದೆ. 2025ರ ಜುಲೈನಲ್ಲಿ 4.2 ಮಿಲಿಯನ್ ಟನ್ ಸಾಗಿಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 11.7ರಷ್ಟು (0.49 ಮಿಲಿಯನ್ ಟನ್) ಹೆಚ್ಚು ಸರಕು ಸಾಗಿಸಲಾಗಿದೆ.
2026-27 ಆರ್ಥಿಕ ವರ್ಷದ ಜುಲೈವರೆಗೆ ಒಟ್ಟು ಸರಕು ಸಾಗಣೆೆ 17.19 ಮಿಲಿಯನ್ ಟನ್ ಆಗಿದ್ದು, ಹಿಂದಿನ ವರ್ಷದ 16.27 ಮಿಲಿಯನ್ ಟನ್​ಗಿಂತ ಶೇ. 5.7 ರಷ್ಟು ಹೆಚ್ಚಳವಾಗಿದೆ.
ಆದಾಯದ ದೃಷ್ಟಿಯಿಂದ ಇದೇ ಜುಲೈನಲ್ಲಿ 793.31 ಕೋಟಿ ಒಟ್ಟು ಆದಾಯ ಗಳಿಸಿದ್ದು, ಇದು ಶೇ. 5.21ರಷ್ಟು ಏರಿಕೆಯಾಗಿದೆ. ಸರಕು ಆದಾಯ 449.27 ಕೋಟಿ ರೂ. (ಶೇ. 6.49 ಏರಿಕೆ) ಆಗಿದೆ.
ಪ್ರಯಾಣಿಕರ ಆದಾಯ 303.54 ಕೋಟಿ ರೂ. (ಶೇ. 6.01 ಏರಿಕೆ) ಆಗಿದೆ.

ಈ ತಿಂಗಳಲ್ಲಿ 14.76 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಲಾಗಿದೆ.

ಪಾರ್ಸೆಲ್ ಆದಾಯ 15.30 ಕೋಟಿ ರೂ., ಇತರೆ ಕೋಚಿಂಗ್ ಆದಾಯ 25.21 ಕೋಟಿ ರೂ., ಸಂಡ್ರಿ ಆದಾಯ 15.29 ಕೋಟಿ ರೂ. ಆಗಿದೆ.

ವಾಣಿಜ್ಯ ಸಂಡ್ರಿ ಆದಾಯ 5.84 ಕೋಟಿ ರೂ. ಆಗಿದ್ದು, ಶೇ. 8.75 ಏರಿಕೆಯಾಗಿದೆ. ಟಿಕೆಟ್ ಪರಿಶೀಲನೆಯಿಂದ 4.54 ಕೋಟಿ ರೂ. ಆದಾಯ ಲಭಿಸಿದೆ.

ಜುಲೈವರೆಗೆ ಒಟ್ಟು ಆದಾಯ 3,031.84 ಕೋಟಿ ರೂ. ತಲುಪಿದ್ದು, ಹಿಂದಿನ ವರ್ಷದ 2,987.55 ಕೋಟಿ ರೂ.ಗಿಂತ ಶೇ. 1.48ರಷ್ಟು ಹೆಚ್ಚಾಗಿದೆ.

ಸರಕು ಆದಾಯ 1,650.32 ಕೋಟಿ ರೂ. ಆಗಿದ್ದು, ಪ್ರಮುಖ ಕೊಡುಗೆ ನೀಡಿದೆ. ಪ್ರಯಾಣಿಕರ ಆದಾಯ 1,203.73 ಕೋಟಿ ರೂ. ಆಗಿ, ಶೇ. 13.20ರಷ್ಟು ಏರಿಕೆಯಾಗಿದೆ.

ಪ್ರಯಾಣಿಕರ ಸಂಖ್ಯೆ 61.56 ಮಿಲಿಯನ್ ಆಗಿ ಶೇ. 4.18 ಹೆಚ್ಚಾಗಿದೆ. ಟಿಕೆಟ್ ಪರಿಶೀಲನಾ ಆದಾಯ 23.33 ಕೋಟಿ ರೂ. (ಶೇ. 3.50 ಏರಿಕೆ) ಆಗಿದ್ದು, ಪಾರ್ಸೆಲ್ ಆದಾಯ 58.70 ಕೋಟಿ ರೂ. (ಶೆ. 3.24 ಏರಿಕೆ) ಆಗಿದೆ.