ಜಿಲ್ಲಾಧಿಕಾರಿ ಸ್ನೇಹಲ್ ಆರ್. 
ಧಾರವಾಡ

ಪಹಣಿಯಲ್ಲಿ ನಿಖರ ಬೆಳೆ ವಿವರ ದಾಖಲಿಸಿ

ಧಾರವಾಡ: ರೈತರ ಬೆಳೆ ಸಮೀಕ್ಷೆಯ ಡೇಟಾ ಹಾಗೂ ಬೆಳೆ ವಿಮೆ ಅರ್ಜಿಯ ಮಾಹಿತಿ ಹೊಂದಾಣಿಕೆಯಾಗದಿದ್ದರೆ ವಿಮೆ ಪರಿಹಾರ ತಿರಸ್ಕೃತಗೊಳ್ಳುವ ಸಾಧ್ಯತೆ ಇರುತ್ತದೆ. ಕೃಷಿ ಇಲಾಖೆಯ ಇತರೆ ಸವಲತ್ತುಗಳು, ಬೆಂಬಲ ಬೆಲೆ ಯೋಜನೆ ಹಾಗೂ ಪರಿಹಾರ ಪಡೆಯಲು ಸಮೀಕ್ಷೆಯೇ ಆಧಾರವಾಗಿರುತ್ತದೆ. ರೈತರ ಪಹಣಿ (ಆರ್‌ಟಿಸಿ) ಪತ್ರಿಕೆಯಲ್ಲಿ ರೈತರು ಬೆಳೆದ ನಿಖರ ಬೆಳೆ ವಿವರಗಳನ್ನು ಅಽಕೃತವಾಗಿ ದಾಖಲಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಳೆ ಸಮೀಕ್ಷೆ ಯೋಜನೆಯಡಿ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ರೈತರ ಜಮೀನಿನ ಬೆಳೆ ವಿವರಗಳನ್ನು ದಾಖಲಿಸಲು ಈಗಾಗಲೇ ಅವಕಾಶವನ್ನು ಕಲ್ಪಿಸಲಾಗಿದೆ. ವಿವಿಧ ಇಲಾಖೆಗಳ ಸವಲತ್ತುಗಳನ್ನು ಪಡೆಯಲು ಪಹಣಿಯಲ್ಲಿ ಬೆಳೆ ವಿವರ ದಾಖಲಿಸಬೇಕು.
ಸ್ವತಃ ರೈತರೇ ತಮ್ಮ ಮೊಬೈಲ್ ಆ್ಯಪ್ ಮೂಲಕ ಸಕಾಲಿಕವಾಗಿ ಬೆಳೆ ವಿವರಗಳನ್ನು ತಂತ್ರಾಂಶದಲ್ಲಿ ಅಪ್ಲೋಡ್ ಮಾಡುವುದರಿಂದ ನ್ಯೂನ್ಯತೆಗಳನ್ನು ಕಡಿಮೆ ಮಾಡಬಹುದು ಹಾಗೂ ಸೌಲಭ್ಯಗಳಿಂದ ವಂಚಿತರಾಗುವುದನ್ನು ಸಹ ತಪ್ಪಿಸಬಹುದು. ರೈತರ ಬೆಳೆ ಸಮೀಕ್ಷೆ ಆ್ಯಪ್‌ನ್ನು ಪ್ರೂಟ್ಸ್ ತಂತ್ರಾಂಶದೊAದಿಗೆ ಸಂಯೋಜಿಸಿ ಸರಳೀಕರಿಸಲಾಗಿದೆ.
ಬೆಳೆ ಸಮೀಕ್ಷೆ ಚಟುವಟಿಕೆಗಳ ವಿವರ:
ಆ. 15ರೊಳಗೆ ಖಾಸಗಿ ನಿವಾಸಿಗಳಿಂದ ಬೆಳೆ ಸಮೀಕ್ಷೆ ಕೈಗೊಳ್ಳಬೇಕು. ಆ. 20ರೊಳಗೆ ಸಮೀಕ್ಷೆ ಮಾಹಿತಿಗೆ ಮೇಲ್ವಿಚಾರಕರ ಪರಿಶೀಲನೆ ಮಾಡಬೇಕು. ಆ. 23ರೊಳಗೆ ಮರು ಸಮೀಕ್ಷೆ ಮಾಡಲಾಗುವುದು. ಆ. 25ರೊಳಗೆ ಮರು ಸಮೀಕ್ಷೆ ಮಾಹಿತಿಯ ಮೇಲ್ವಿಚಾರಕರ ಪರಿಶೀಲನೆ ಮಾಡುವರು. ಅಗಸ್ಟ್ 28, 2026 ರೊಳಗಾಗಿ ಸಮೀಕ್ಷೆ ಆಗದೇ ಇರುವ ತಾಕುಗಳಿಗೆ ಮಾತ್ರ ರೈತರ ಆಕ್ಷೇಪಣೆ ಸಲ್ಲಿಸಬಹುದು. ಆ. 31ರೊಳಗೆ ರೈತರ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗುವುದು. ತದನಂತರ ಯಾವುದೇ ವಿಸ್ತರಣೆಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.
ಮಾಹಿತಿಗಾಗಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ.