540 ಚೀಲ ಪಡಿತರ ration ಅಕ್ಕಿಯನ್ನು ಜಪ್ತಿ
ಹುಬ್ಬಳ್ಳಿ: ಅಕ್ರಮ ಪಡಿತರ ಅಕ್ಕಿ(ration) ಸಾಗಿಸುತ್ತಿದ್ದ ವ್ಯಕ್ತಿಯ ವಿರುದ್ಧ ಇಲ್ಲಿಯ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಧವಾರ ಸಂಜೆ ಟ್ರಕ್‌ನಲ್ಲಿ 10 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿಯನ್ನು ಚಾಲಕ ಅಜ್ಮೀರ ನಗರದ ಇಮ್ರಾನ್ ಕಲಾಲ (27) ಸಾಗಿಸುತ್ತಿದ್ದ. ಖಚಿತ ಮಾಹಿತಿ ಆಧರಿಸಿ ಆಹಾರ ಇಲಾಖೆ ಅಧಿಕಾರಿಗಳು ಕಾರವಾರ ರಸ್ತೆ ಸೇತುವೆ ಬಳಿ ವಾಹನ ಸಮೇತ 540 ಚೀಲ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಹಾವೇರಿಯಿಂದ ಮುಂಬೈಗೆ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು. ಇಮ್ರಾನ್ ಕಲಾಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.