ವಿಶ್ವ ರಕ್ತದಾನಿಗಳ ದಿನದ ನಿಮಿತ್ತ rastrothana ರಾಷ್ಟ್ರೋತ್ಥಾನ ರಕ್ತಕೇಂದ್ರದ ವತಿಯಿಂದ ಹುಬ್ಬಳ್ಳಿಯಲ್ಲಿ ಸೋಮವಾರ ಜಾಗೃತಿ ಜಾಥಾ ಜರುಗಿತು. 
ಧಾರವಾಡ

rastrothana ನಿರಂತರ ರಕ್ತದಾನ ಮಾಡಲು ಸಲಹೆ

ಮರಿದೇವ ಹೂಗಾರ
ಹುಬ್ಬಳ್ಳಿ: ಶಾ ದಾಮಜಿ ಜಾದವಜಿ ಛೇಡಾ ಮೆಮೋರಿಯಲ್ ರಾಷ್ಟ್ರೋತ್ಥಾನ rastrothana ರಕ್ತಕೇಂದ್ರದ ವತಿಯಿಂದ ನಗರದಲ್ಲಿ ವಿಶ್ವ ರಕ್ತದಾನಿಗಳ ದಿನದ ನಿಮಿತ್ತ ಸೋಮವಾರ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು.
ಜಾಗೃತಿ ಜಾಥಾವು ನಿಲಿಜಿನ್ ರಸ್ತೆ ಮೂಲಕ ಹಳೆಯ ಕೋರ್ಟ್ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನಪೇಟೆ, ಎಸ್.ಟಿ. ಭಂಡಾರಿ, ಮೂರುಸಾವಿರ ಮಠದಿಂದ ಮರಳಿ ನಿಲಿಜಿನ್ ರಸ್ತೆಯಲ್ಲಿ ರಕ್ತ ಭಂಡಾರ ತಲುಪಿತು.
ನಂತರ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದೇವರಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ಶ್ರೀ ಸಿದ್ಧ ಶಿವಯೋಗಿ ಸ್ವಾಮೀಜಿ, ನಿರಂತರವಾಗಿ ರಕ್ತದಾನ ಮಾಡಬೇಕು. ಭಗವಂತ ನೀಡಿದ ಈ ಶರೀರದಿಂದ ಇನ್ನೊಬ್ಬರಿಗೆ ಉಪಯೋಗವಿದ್ದರೆ ದಾನ ಮಾಡಬೇಕು. ಇದರಲ್ಲಿ ರಕ್ತದಾನವೂ ಒಂದು. ರಕ್ತದಾನ ಮಾಡುವುದರಿಂದ ದೇಹದಲ್ಲಿನ ರಕ್ತ ಶುದ್ಧಿಯಾಗುತ್ತದೆ ಎಂದರು.
ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ 95 ಬಾರಿ, ಶ್ರೀಧರ ಜೋಶಿ 60 ಸಲ, ವಿನೋದಕುಮಾರ ಪಟ್ವಾ 71ನೇ ಬಾರಿ ರಕ್ತದಾನ ಮಾಡಿದರು. ಅಲ್ಲದೆ ಬಹಳಷ್ಟು ಜನರು ರಕ್ತದಾನ ಮಾಡಿದರು. ನಿಯಮಿತವಾಗಿ ರಕ್ತದಾನ ಮಾಡುವ ದಾನಿಗಳನ್ನು ಸನ್ಮಾನಿಸಲಾಯಿತು.
ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ, ವಿಎಕೆ ಫೌಂಡೇಷನ್ ಸಂಸ್ಥಾಪಕ ವೆಂಕಟೇಶ ಕಾಟವೆ, ಶಿವಲಿಂಗಯ್ಯ ಶಿವಯೋಗಿಮಠ, ಡ್ಯಾಪ್ಕೋ ಅಧಿಕಾರಿ ಡಾ. ರಾಘವೇಂದ್ರ ಬೋವೆರ, ಸಹಾಯಕ ಡ್ರಗ್ ಕಂಟ್ರೋಲರ್ ನೀಲಿಮಾ ಅಶೋಕ ಕೊಟ್ಟಣ, ಅಜಯ ಮುದುಗಲ್, ವೀರೇಂದ್ರ ಛೇಡಾ, ರವಿ ನಾಯಕ, ಡಾ.ಎಸ್.ಎಸ್. ಸಂಗೊಳ್ಳಿ, ಡಾ.ಸಿ.ಡಿ. ಕಳಸಗೌಡರ, ನವೀನ ಚಿಕ್ಕಮಠ, ಬಸವರಾಜ ದೇವರಮನಿ, ವಿವಿಧ ಶಾಲಾ ಕಾಲೇಜ್‌ಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.