rangarohana ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಭರತನಾಟ್ಯ ವಿದುಷಿ ಡಾ. ಸೀಮಾ ಉಪಾಧ್ಯಾಯ.
- ಮೈಸೂರಿನ ಹಿರಿಯ ವಿದ್ವಾಂಸ ಪ್ರೊ. ರಾಮಮೂರ್ತಿ ರಾವ್ ಅತಿಥಿಗಳಾಗಿ ಪಾಲ್ಗೊಳ್ಳುವರು.
- ವೈವಿದ್ಯಮಯ ನೃತ್ಯ ಪ್ರಸ್ತುತಿಗಳ ಮೂಲಕ ನಡೆಯಲಿರುವ ಕಲಾ ಸಂಭ್ರಮ.
- ಭರತನಾಟ್ಯ ಸಂಪ್ರದಾಯದ ಮಲ್ಹಾರಿ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ.
ಹುಬ್ಬಳ್ಳಿ :
ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಭರತನಾಟ್ಯ ವಿದುಷಿ ಡಾ. ಸೀಮಾ ಉಪಾಧ್ಯಾಯ, ರಾತ್ರಿ 7 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೈಸೂರಿನ ಹಿರಿಯ ವಿದ್ವಾಂಸ ಪ್ರೊ. ರಾಮಮೂರ್ತಿ ರಾವ್, ಕೆಎಂಸಿಆರ್ಐ ನಿರ್ದೇಶಕ ಡಾ. ಕಮ್ಮಾರ ಹಾಗೂ ಜಿಲ್ಲಾಧಿಕಾರಿ ಸ್ನೇಹಲ್ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.
ಭರತನಾಟ್ಯ ಸಂಪ್ರದಾಯದ ಮಲ್ಹಾರಿ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ವೈವಿದ್ಯಮಯ ನೃತ್ಯ ಪ್ರಸ್ತುತಿಗಳ ಮೂಲಕ ನಡೆಯಲಿರುವ ಕಲಾ ಸಂಭ್ರಮವು ತಿಲ್ಲಾನದೊಂದಿಗೆ ಸಮಾರೋಪಗೊಳ್ಳಲಿದೆ ಎಂದು ತಿಳಿಸಿದರು.
ಗಾಯನದಲ್ಲಿ ವಿದುಷಿ ವಾಣಿ ಉಡುಪಿ, ಮೃದಂಗದಲ್ಲಿ ಪಂಚಮ ಉಪಾಧ್ಯಾಯ, ರಿದಮ್ ಪ್ಯಾಡ್ನಲ್ಲಿ ಡಾ. ಗೋಪಿಕೃಷ್ಣ ನಂಬುದಿಯಾರ ಹಾಗೂ ಕೊಳಲಿನಲ್ಲಿ ವೈಭವ ಭಟ್ ಸಹಕರಿಸಲಿದ್ದಾರೆ ಎಂದರು.
ಡಾ. ಶ್ರೀನಿವಾಸ ಜೋಶಿ, ಡಾ. ದೀಪ್ತಿ ಜೋಶಿ, ಭರತನಾಟ್ಯ ಕಲಾವಿದೆ ಅವನಿ ಜೋಶಿ ಸುದ್ದಿಗೋಷ್ಠಿಯಲ್ಲಿ ಇದ್ದರು.