ಹುಬ್ಬಳ್ಳಿಯಲ್ಲಿ ಮಯೂರ ನೃತ್ಯ ಅಕಾಡೆಮಿ (Ranga pravesh) ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದುಷಿ ಹೇಮಾ ವಾಘಮೋಡೆ ಶಿಷ್ಯೆಯರಾದ ಸಾನಿಧ್ಯ ಪ್ಯಾಟಿ, ದಿವ್ಯಾ ಮೂಲ್ಯ ಮತ್ತು ಆರಾಧ್ಯ ಕೆಂಧುಳಿ ಭರತನಾಟ್ಯ ರಂಗಪ್ರವೇಶ ಮಾಡಿದರು.  
ಧಾರವಾಡ

ನೃತ್ಯಾಭ್ಯಾಸದಿಂದ (Ranga pravesh) ಏಕಾಗ್ರತೆ, ಆತ್ಮವಿಶ್ವಾಸ

ಸಂತೋಷ ವೈದ್ಯ

ನೃತ್ಯವು ಭಾವನೆ, ರಾಗ ಮತ್ತು ತಾಳಗಳ

(Ranga pravesh)

ಸಂಗಮವಾಗಿದೆ. ನೃತ್ಯಾಭ್ಯಾಸವು ವಿದ್ಯಾರ್ಥಿಗಳಲ್ಲಿ ಶಿಸ್ತು, ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಸೃಜನಶೀಲತೆಯನ್ನು ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಹುಬ್ಬಳ್ಳಿಯ ಚಿನ್ಮಯ ವಿದ್ಯಾಲಯ (ಸಿಬಿಎಸ್​ಇ) ಪ್ರಾಚಾರ್ಯು ಭುವನೇಶ್ವರಿ ನಾವಡಾ ಹೇಳಿದರು.

ಇಲ್ಲಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಮಯೂರ ನೃತ್ಯ ಅಕಾಡೆಮಿಯಿಂದ ಶನಿವಾರ ಆಯೋಜಿಸಿದ್ದ ವಿದುಷಿ ಹೇಮಾ ವಾಘಮೋಡೆ ಶಿಷ್ಯೆಯರಾದ ಸಾನಿಧ್ಯ ಪ್ಯಾಟಿ, ದಿವ್ಯಾ ಮೂಲ್ಯ ಮತ್ತು ಆರಾಧ್ಯ ಕೆಂಧುಳಿ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಿನ್ಮಯ ವಿದ್ಯಾಲಯ (ರಾಜ್ಯ ಪಠ್ಯಕ್ರಮ) ಪ್ರಾಚಾರ್ಯು ನೀತಾ ಹೆಗಡೆ ಮಾತನಾಡಿ, ದೇಶದ ಶ್ರೀಮಂತ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಯುವಪೀಳಿಗೆಯ ಪಾತ್ರ ಮುಖ್ಯವಾಗಿದೆ. ರಂಗಪ್ರವೇಶ ಮಾಡುತ್ತಿರುವ ಈ ಮೂವರು ನಮ್ಮ ಶಾಲೆಯ ವಿದ್ಯಾರ್ಥಿನಿಯರೇ ಆಗಿರುವುದು ನಮಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದರು.
ಮೂವರು ಕಲಾವಿದೆಯರು ನಟರಾಜ ಪೂಜೆ ಹಾಗೂ ನಂದಾದೀಪ ಬೆಳಗಿಸುವುದರೊಂದಿಗೆ ರಂಗಪ್ರವೇಶ ಮಾಡಿದರು.ಪುಷ್ಪಾಂಜಲಿ, ಗಣಪತಿ ಕೌತುವಂ, ರಾವಣ ಕೃತ ತಾಂಡವ ಸ್ತೋತ್ರ, ಜತೀಸ್ವರ, ದಶಾವತಾರ, ಶಿವ ಪದಮ, ದೇವರನಾಮ, ದೇವಿ ಕೃತಿ ಹಾಗೂ ತಿಲ್ಲಾನ ರೂಪಕಗಳನ್ನು ಪ್ರದರ್ಶಿಸಿದರು.
ನಟುವಾಂಗದಲ್ಲಿ ವಿದುಷಿ ಡಾ. ಹೇಮಾ ವಾಘಮೊಡೆ, ಗಾಯನದಲ್ಲಿ ಕರ್ನಾಟಕ ಕಲಾಶ್ರೀ ವಿದ್ವಾನ್ ಬಾಲಸುಬ್ರಮಣ್ಯ ಶರ್ವ, ಮೃದಂಗದಲ್ಲಿ ವಿದ್ವಾನ್ ಪಂಚಮ ಉಪಾಧ್ಯಾಯ, ವೇಣು ವಾದನದಲ್ಲಿ ವಿದ್ವಾನ್ ರಘು ಸಿಂಹ ಎ. ಎನ್., ರಿದಂ ಪ್ಯಾಡ್​ನಲ್ಲಿ ವಿದ್ವಾನ್ ಡಿ. ವಿ. ಪ್ರಸನ್ನ ಕುಮಾರ ಹಿನ್ನೆಲೆ ಸಂಗೀತ ನೀಡಿದರು. ಡಾ. ಸರ್ವಮಂಗಳ ಪಿ. ಆರ್. ನಿರೂಪಿಸಿದರು. ದಿನೇಶ ವಾಘಮೊಡೆ ವಂದಿಸಿದರು.