ರಾಕೇಶ್​ 
ಧಾರವಾಡ

ನೇಪಾಳದಲ್ಲಿ ಸಂಪರ್ಕಕ್ಕೆ ಸಿಗದ ಧಾರವಾಡದ ರಾಕೇಶ್​

ಮಂಜುನಾಥ ಅಂಗಡಿ

ಧಾರವಾಡ: ನೆರೆ ದುರಂತದಿಂದ ನಲುಗಿರುವ ನೇಪಾಳಕ್ಕೆ ಹೋಗಿದ್ದ ಧಾರವಾಡ ಮೂಲದ ರಾಕೇಶ್​ ನಾಯಕ್​ (39) ಎಂಬುವರು ಕುಟುಂಬದವರ ಸಂಪರ್ಕಕ್ಕೆ ಸಿಗುತ್ತಿಲ್ಲ. ಧಾರವಾಡದ ಶಿವಗಿರಿ ಮೂಲದ ರಾಕೇಶ್​ ನಾಯಕ್​ 10 ವರ್ಷಗಳಿಂದ ಆಸ್ಟ್ರೆಲಿಯಾದಲ್ಲಿ ನೆಲೆಸಿದ್ದಾರೆ. ಆ. 10ರಂದು ದೆಹಲಿಗೆ ಬಂದು ಅಲ್ಲಿಂದ ನೇಪಾಳ ಪ್ರವಾಸ ಹೋಗಿದ್ದರು.

ಸದ್ಗುರು ಜಗ್ಗಿ ವಾಸುದೇವ ಸ್ಥಾಪಿತ ಈಶಾ ಫೌಂಡೇಶನ್​ ತಂಡದೊಂದಿಗೆ ರಾಕೇಶ್​ ನೇಪಾಳಕ್ಕೆ ಹೋಗಿದ್ದಾರೆ. ಅವರು ಆ. 25ರವರೆಗೆ ಪತ್ನಿ ಜತೆ ಸಂಪರ್ಕದಲ್ಲಿದ್ದರು. 26ರಿಂದ ಪತ್ನಿ ಹಾಗೂ ಕುಟುಂಬದವರ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರಿಗೆ ಏನೂ ಆಗಿಲ್ಲ ಎಂಬ ಮಾಹಿತಿ ಬಂದಿದ್ದು, ಆದರೂ ಸಂಪರ್ಕಕ್ಕೆ ಸಿಗದಿರುವುದರಿಂದ ಪಾಲಕರಲ್ಲಿ ಆತಂಕ ಮಡುಗಟ್ಟಿದೆ.
ಈ ಕುರಿತು ಅವರ ಪಾಲಕರು ಜಿಲ್ಲಾಡಳಿತದ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಜಿಲ್ಲಾಡಳಿತ ಸರ್ಕಾರಕ್ಕೆ ಮಾಹಿತಿ ರವಾನಿಸಿದೆ.