ಹುಬ್ಬಳ್ಳಿಯ ಸರಸ್ವತಿಪುರದಲ್ಲಿ (rajata mahotsava) ಶ್ರೀ ಈಶ್ವರ, ಶ್ರೀ ಗಣೇಶ ಹಾಗೂ ಶ್ರೀ ಸರಸ್ವತಿ ದೇವಸ್ಥಾನದ 25ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸಭಾಪತಿ ಬಸವರಾಜ ಹೊರಟ್ಟಿ ಭಾನುವಾರ ಉದ್ಘಾಟಿಸಿದರು. 
ಧಾರವಾಡ

(rajata mahotsava) ಶ್ರೀ ಈಶ್ವರ ದೇವಸ್ಥಾನದಲ್ಲಿ ಹೋಮ-ಹವನ

ಹುಬ್ಬಳ್ಳಿ: ಸರಸ್ವತಿಪುರ ನಿವಾಸಿಗಳ ಹಿತವರ್ಧಕ ಸಂಘದ ಆಶ್ರಯದಲ್ಲಿ ಇಲ್ಲಿಯ ಸರಸ್ವತಿಪುರದಲ್ಲಿ (rajata mahotsava) ಶ್ರೀ ಈಶ್ವರ, ಶ್ರೀ ಗಣೇಶ ಹಾಗೂ ಶ್ರೀ ಸರಸ್ವತಿ ದೇವಸ್ಥಾನದ 25ನೇ ವಾರ್ಷಿಕೋತ್ಸವವನ್ನು ಭಾನುವಾರ ಏರ್ಪಡಿಸಲಾಗಿತ್ತು.
ನೆಗಳೂರು ಹಿರೇಮಠ ಸಂಸ್ಥಾನದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು.
ಮಾಜಿ ಮೇಯರ್ ರಾಮಣ್ಣ ಬಡಿಗೇರ, ಎಸ್.ಎನ್. ನೆಗಳೂರಮಠ, ಸಿ.ಎಫ್. ಚಿಕ್ಕನಗೌಡರ, ಪ್ರಕಾಶ ಬೆಂಡಿಗೇರಿ, ವಿಶ್ವನಾಥ ಹಿರೇಗೌಡರ, ಸಿ.ಬಿ. ಕುರುವತ್ತಿಗೌಡರ, ಇತರರು ಭಾಗವಹಿಸಿದ್ದರು. ಇದೇ ವೇಳೆ ಗಣಹೋಮ, ಧನ್ವಂತರಿಹೋಮ, ಸರಸ್ವತಿ ಹೋಮವನ್ನು ವೇ. ಶಾಂತವೀರ ಶಾಸ್ತ್ರಿ ಹಾಗೂ ವೇ. ಶಿವಕುಮಾರ ಶಾಸ್ತ್ರಿಗಳ ನೇತೃತ್ವದಲ್ಲಿ ಜರುಗಿತು.