raita sangha ರೈತ ಜಾಗೃತಿ ಸಮಾವೇಶನ ಭಿತ್ತಿಪತ್ರಗಳನ್ನು ಹುಬ್ಬಳ್ಳಿಯಲ್ಲಿ ಪ್ರದರ್ಶಿಸಲಾಯಿತು. 
ಧಾರವಾಡ

raita sangha ರೈತ ಜಾಗೃತಿ ಸಮಾವೇಶ ನಾಳೆ

ಹುಬ್ಬಳ್ಳಿ: ಕರ್ನಾಟಕ raita sangha ರಾಜ್ಯ ರೈತ ಸಂಘ ಹಸಿರು ಸೇನೆ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಜು. 16ರಂದು ಮಧ್ಯಾಹ್ನ 12ಕ್ಕೆ ರೈತ ಜಾಗೃತಿ ಸಮಾವೇಶ ಏರ್ಪಡಿಸಲಾಗಿದೆ ಎಂದು ಸೇನೆ ಅಧ್ಯಕ್ಷ ಡಾ. ವಾಸುದೇವ ಮೇಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ಕ್ಕೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸವಾಯಿ ಗಂಧರ್ವ ಹಾಲ್‌ವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ ಎಂದರು.
ನಂತರ ನಡೆಯಲಿರುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಅಣ್ಣಿಗೇರಿ ದಾಸೋಹ ಮಠದ ಡಾ. ಶಿವಕುಮಾರ ಸ್ವಾಮೀಜಿ, ಮಂಟೂರು ಆನಂದ ಆಶ್ರಮದ ಶ್ರೀ ಮಹಾಂತಲಿಂಗ ಸ್ವಾಮೀಜಿ, ಅಂಕಲಗಿ ಅಡವಿ ಸಿದ್ಧೇಶ್ವರಮಠದ ಶ್ರೀ ಇಂದುಧರ ದೇವರು, ಕಲ್ಯಾಣಪುರ ಮಠದ ಶ್ರೀ ಬಸವಣ್ಣಜ್ಜನವರು, ಮನಸೂರು ಮಠದ ಬಸವರಾಜ ದೇವರು ವಹಿಸುವರು ಎಂದರು.
ಸೇನೆ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಪೂಜಾರ ಅಧ್ಯಕ್ಷತೆ ವಹಿಸುವರು. ವಿವಿಧ ಜನಪ್ರತಿನಿಧಿಗಳು ಆಗಮಿಸುವರು. ಈ ವೇಳೆ ರೈತರ ಸಾಲಮನ್ನಾ, ಬರಪೀಡಿತ ಘೋಷಣೆ, ಬೆಣ್ಣೆಹಳ್ಳದ ಅವೈಜ್ಞಾನಿಕ ಕಾಮಗಾರಿ, ಬೆಳೆ ಪರಿಹಾರ ಬಿಡುಗಡೆ, ನಮ್ಮ ಹೊಲ-ನಮ್ಮ ದಾರಿ ಕಾಮಗಾರಿ ಆರಂಭಿಸಬೇಕು ಸೇರಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಲಾಗುವುದು ಎಂದರು.
ಪ್ರಮುಖರಾದ ಫಕ್ಕೀರಪ್ಪ ಪೂಜಾರ, ಶಿವಾನಂದ ಮಾಯಕಾರ, ರಾಮನಗೌಡ ಬಸನಗೌಡ, ಯಲ್ಲಪ್ಪ ದುಂಧೂರ, ಕಲ್ಲಪ್ಪ ಶಿಶುವಿನಹಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.