ಸಮರ್ಪಕ ಮಳೆಯಾಗಲಿ ಎಂದು rain prayer ಪ್ರಾರ್ಥಿಸಿ ಹುಬ್ಬಳ್ಳಿಯ ಬೆಂಗೇರಿ ನಿವಾಸಿಗಳು ದ್ಯಾಮವ್ವದೇವಿ ದೇವಸ್ಥಾನ ಬಳಿ ಕಪ್ಪೆಗಳಿಗೆ ಮದುವೆ ಮಾಡಿದರು. 
ಧಾರವಾಡ

rain prayer ಮಳೆಗಾಗಿ ಕಪ್ಪೆಗಳಿಗೆ ಮದುವೆ

ಮರಿದೇವ ಹೂಗಾರ
ಹುಬ್ಬಳ್ಳಿ: ಸಮರ್ಪಕ ಮಳೆಯಾಗಲಿ rain prayer ಎಂದು ಪ್ರಾರ್ಥಿಸಿ ಇಲ್ಲಿಯ ಬೆಂಗೇರಿ ನಿವಾಸಿಗಳು ದ್ಯಾಮವ್ವದೇವಿ ದೇವಸ್ಥಾನ ಬಳಿ ಕಪ್ಪೆಗಳಿಗೆ ಮದುವೆ ಮಾಡುವ ಮೂಲಕ ಗಮನ ಸೆಳೆದರು.
ಕಪ್ಪೆಗಳನ್ನು ಅಲಂಕರಿಸಿ, ಮದುವೆ ವಿಧಿ-ವಿಧಾನಗಳನ್ನು ನಡೆಸಿ ವಿಶೇಷ ಪೂಜೆ ಸಲ್ಲಿಸಿದರು. ಬುಜ್ಜಿ ಬಾರೋ ಮಳೆರಾಯ ಎಂದು ಬೇಡಿಕೊಂಡರು.
ಮಹಿಳೆಯರು, ಮಳೆರಾಯ ಬಾರಯ್ಯ ಎಂದು ಹಾಡು ಹಾಡುತ್ತ ಮಳೆ ದೇವರನ್ನು ಪ್ರಾರ್ಥಿಸಿ, ಸುತ್ತುಹಾಕಿ ಪೂಜೆ ಸಲ್ಲಿಸಿದರು.
ಸಮಾಜಸೇವಕ ರಮೇಶ ಮಹಾದೇವಪ್ಪನವರ, ಪಾಲಿಕೆ ಸದಸ್ಯರಾದ ಎಂ.ವೈ. ನರಗುಂದ, ಬೀರಪ್ಪ ಖಂಡೇಕರ, ಪ್ರಮುಖರಾದ ಹೂವಪ್ಪ ದಾಯಗೋಡಿ, ರಾಜು ಕಾಳೆ, ರವಿ ಮಾಳಗಿ, ಅಡಿವೆಪ್ಪ ಹೊಸಮನಿ, ಸತೀಶ ಬೊಮ್ಮನಹಳ್ಳಿ, ಕಲ್ಲಫ್ಪ ಹೊಸಮನಿ, ಬಸಮ್ಮ ಹೋಳಿ, ಮಹಿಳಾ ಮಂಡಳದ ಸದಸ್ಯರು ಇತರರಿದ್ದರು.