ಹುಬ್ಬಳ್ಳಿ ರೈಲು ನಿಲ್ದಾಣ (porters protest) ಕೂಲಿ ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. 
ಧಾರವಾಡ

ರೈಲ್ವೆ (porters protest) ಕೂಲಿಕಾರ್ಮಿಕರ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ವಿವಿಧ ಸೌಲಭ್ಯ ನೀಡಲು ಮನವಿ
  • ಬ್ಯಾಟರಿ ವಾಹನಗಳಲ್ಲಿ ಲಗ್ಗೇಜ್​ ಸಾಗಿಸುವ ಪ್ರಸ್ತಾವನೆ ಕೈಬಿಡಬೇಕು
  • ಸಾಮಾಜಿಕ ಭದ್ರತೆ ಒದಗಿಸಬೇಕು
ಹುಬ್ಬಳ್ಳಿ: ಇಲ್ಲಿಯ ರೈಲು ನಿಲ್ದಾಣದಲ್ಲಿ ಕೂಲಿ (porters protest) ಕಾರ್ಮಿಕರ ಜೀವನೋಪಾಯಕ್ಕೆ ಧಕ್ಕೆ ತರುವಂತೆ ಯಾವುದೇ ಕ್ರಮಗಳನ್ನು ಇಲಾಖೆ ಕೈಗೊಳ್ಳಬಾರದು ಎಂದು ಇಲ್ಲಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ಕೂಲಿ ಪೋರ್ಟರ್ಸ್ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಬ್ಯಾಟರಿ ಚಾಲಿತ ವಾಹನಗಳಲ್ಲಿ ಲಗ್ಗೇಜ್​ ಸಾಗಿಸುವ ಪ್ರಸ್ತಾವನೆಯನ್ನು ಕೈಬಿಡಬೇಕು. ಕೂಲಿಕಾರರನ್ನು ಸರ್ಕಾರಿ ಉದ್ಯೋಗಿಗಳೆಂದು ಪರಿಗಣಿಸಬೇಕು. ಸಾಮಾಜಿಕ ಭದ್ರತೆ ಒದಗಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.
ಬ್ಯಾಟರಿ ರಿಕ್ಷಾ, ಟ್ರಾಲಿ ಸಿಸ್ಟಂ, ಹೊರಗುತ್ತಿಗೆ ವ್ಯವಸ್ಥೆಯನ್ನು ನಿಷೇಧಿಸಬೇಕು ಎಂದು ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಿದ ಕೂಲಿಕಾರರು ನಂತರ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರೈಲ್ವೆ ಮಂಡಳಿಯು ಸೌಲಭ್ಯಗಳನ್ನು ಕೊಡುವುದಾಗಿ ಹೇಳಿದೆ. ಇದುವರೆಗೂ ಸರಿಯಾದ ಸವಲತ್ತುಗಳನ್ನು ಕೊಟ್ಟಿಲ್ಲ. ಕುಡಿಯುವ ನೀರು, ಸಮವಸ್ತ್ರ ಮುಂತಾದ ಸೌಕರ್ಯ ನೀಡಿ ಎಂದು ಆಗ್ರಹಿಸಿದರು.
ಸಂಘದ ಉಪಾಧ್ಯಕ್ಷ ಚಂದ್ರು ಛಲವಾದಿ, ಜಾರ ಜಮಖಾನೆವಾಲೆ, ಅಬ್ದುಲ್​ ರಜಾಕ್​ ಬಳ್ಳಾರಿ, ಗೌಸ್​ ಮೊದಿನ್​ ಅತ್ತರ, ಶರೀಫ ನಾರಂಗಿವಾಲೆ, ಇತರರು ಇದ್ದರು.