ವಿಶೇಷ ರೈಲುಗಳಿಂದ (special train) ಶೇ. 23ರಷ್ಟು ಆದಾಯ ಹೆಚ್ಚಳ 
ಧಾರವಾಡ

ವಿಶೇಷ ರೈಲುಗಳಿಂದ (special train) ಶೇ. 23ರಷ್ಟು ಆದಾಯ ಹೆಚ್ಚಳ

ಆನಂದಕುಮಾರ ಅಂಗಡಿ
ಇದೇ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ನೈಋತ್ಯ ರೈಲ್ವೆ ವಲಯವು 355 ವಿಶೇಷ ರೈಲುಗಳನ್ನು ಓಡಿಸಿದೆ. ಇದರಿಂದ ಒಟ್ಟು 171.47 ಕೋಟಿ ರೂ. ಆದಾಯ ಗಳಿಸಿದೆ.
ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 351 ವಿಶೇಷ ರೈಲುಗಳ ಕಾರ್ಯುಚರಣೆಯಿಂದ 138.83 ಕೋಟಿ ರೂ. ಆದಾಯ ಬಂದಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ 32.64 ಕೋಟಿ ರೂ. (ಶೇ.23ರಷ್ಟು) ಹೆಚ್ಚುವರಿ ಆದಾಯ ಬಂದಿದೆ.
ಈ ಅವಧಿಯಲ್ಲಿ 19.55 ಲಕ್ಷ ಪ್ರಯಾಣಿಕರು ವಿಶೇಷ ರೈಲು ಸೇವೆ ಪಡೆದುಕೊಂಡಿದ್ದಾರೆ. ನೈಋತ್ಯ ರೈಲ್ವೆ ವಲಯ ನಿಯಮಿತ ರೈಲು ಸೇವೆಗಳ ಬಲವರ್ಧನೆಗೂ ಆದ್ಯತೆ ನೀಡಿದೆ. ಏಪ್ರಿಲ್​ನಿಂದ ಅಕ್ಟೋಬರ್​ವರೆಗೆ 521 ಹೆಚ್ಚುವರಿ ಬೋಗಿಗಳನ್ನು ಜೋಡಿಸಿ, 35,524 ಹೆಚ್ಚುವರಿ ಬರ್ತ್​ಗಳನ್ನು ಒದಗಿಸಲಾಗಿದೆ. ಇದರಿಂದ 24,530 ಹೆಚ್ಚುವರಿ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗಿದೆ.
ಇದರಿಂದ 2.09 ಕೋಟಿ ರೂ. ಹೆಚ್ಚುವರಿ ಆದಾಯ ಬಂದಿದೆ. ಜೂನ್ ಮತ್ತು ಅಕ್ಟೋಬರ್​ನ ಪೀಕ್ ಟ್ರ್ರಾವೆಲ್ ಮತ್ತು ಹಬ್ಬದ ಋತುಗಳಲ್ಲಿ ಅತ್ಯಧಿಕ ಹೆಚ್ಚುವರಿ ಆದಾಯ ಗಳಿಕೆ ದಾಖಲಾಗಿದೆ.