raghavendr swami ಹುಬ್ಬಳ್ಳಿಯ ಭವಾನಿನಗರ ಶ್ರೀ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಧ್ಯಾರಾಧನಾ ಮಹೋತ್ಸವ ಅಂಗವಾಗಿ ಬೃಂದಾವನಕ್ಕೆ ಹೂ ಹಣ್ಣುಗಳಿಂದ ಅಲಂಕಾರ ಮಾಡಲಾಗಿತ್ತು. 
ಧಾರವಾಡ

raghavendr swami ರಾಯರ ಮಠದಲ್ಲಿ ಮಧ್ಯಾರಾಧನೆ ವೈಭವ

ಪ್ರಮುಖ ಮುಖ್ಯಾಂಶಗಳು

  • ಬೃಂದಾವನಕ್ಕೆ ಫಲಪುಷ್ಪಗಳಿಂದ ಅಲಂಕಾರ
  • ದರ್ಶನ ಪಡೆದು ಕೃತಾರ್ಥರಾದ ಭಕ್ತರು

ಹುಬ್ಬಳ್ಳಿ: raghavendr swami ವಾಣಿಜ್ಯನಗರಿ ಹುಬ್ಬಳ್ಳಿಯ ವಿವಿಧೆಡೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ರಾಯರ ಆರಾಧನೆ ಮಹೋತ್ಸವದ ಎರಡನೇ ದಿನ ಮಧ್ಯಾರಾಧನೆ ವೈಭವ ಕಂಡು ಬಂತು.

355ನೇ ಆರಾಧನೆ ಮಹೋತ್ಸವ ಅಂಗವಾಗಿ ರಾಯರ ಮಠದಲ್ಲಿ ಬೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಫಲಪುಷ್ಪ, ತುಳಸಿ ಮುಂತಾದ ಪರಿಮಳಯುಕ್ತ ವಸ್ತುಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದ ಭಕ್ತರು ರಾಯರ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಇಲ್ಲಿಯ ಭವಾನಿನಗರ, ನವನಗರ, ನೇಕಾರನಗರ, ವಿದ್ಯಾನಗರ, ದೇಶಪಾಂಡೆನಗರ, ತೊರವಿ ಗಲ್ಲಿ, ವಿಶ್ವೇಶ್ವರನಗರ ಸೇರಿದಂತೆ ಎಲ್ಲ ರಾವೇಂದ್ರ ಮಠದಲ್ಲಿ ಭಕ್ತಿ ಭಾವದಿಂದ ರಾಯರ ಆರಾಧನೆ ನಡೆಯಿತು.
ಅನೇಕ ಜನರು ಭಜನೆ ಮಾಡಿ ಭಕ್ತಿ ಸಮರ್ಪಿಸಿದರು. ಬೃಂದಾವನ ದರ್ಶನ ಪಡೆದ ಭಕ್ತರು ತೀರ್ಥ ಪ್ರಸಾದ, ಮಂತ್ರಾಕ್ಷತೆ ಪಡೆದರು. ನಂತರ ಮಹಾಪ್ರಸಾದ ಸ್ವೀಕರಿಸಿದರು.
ಶ್ರೀ ರಾವೇಂದ್ರ ಮಠದಲ್ಲಿ ಮಧ್ಯಾರಾಧನೆ ನಿಮಿತ್ತ ಬೆಳಗ್ಗೆ ಸುಪ್ರಭಾತ, ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕಗಳು ನಡೆದವು. ಬೆಳಗ್ಗೆ 10ಕ್ಕೆ ಸೇವಾ ಸಂಕಲ್ಪ, ಅಲಂಕಾರ ಹಾಗೂ ಹಸ್ತೋದಕ ನೆರವೇರಿಸಲಾಯಿತು.

ಸಂಜೆ ಪಲ್ಲಕ್ಕಿ ಸೇವೆ, ಅಷ್ಟಾವಧಾನ, ತೊಟ್ಟಿಲ ಸೇವೆ ಹಾಗೂ ವಿಶೇಷ ಸೇವೆ ಸಲ್ಲಿಸಿದವರಿಗೆ

ಮಂತ್ರಾಕ್ಷತೆ ವಿತರಣೆ ಮಾಡಲಾಯಿತು.

ಮಧ್ಯಾರಾಧನೆ ಅಂಗವಾಗಿ ಪಂ. ಪುತ್ತೂರ ನರಸಿಂಹ ನಾಯಕ ಅವರಿಂದ ದಾಸವಾಣಿ, ಸಂಜೆ 7ಕ್ಕೆ ಕಲಾವೈಭವ ತಂಡದಿಂದ ದಶಾವತಾರ ನೃತ್ಯ ರೂಪಕ ಏರ್ಪಡಿಸಲಾಗಿತ್ತು.
ಶಾಸಕರ ಭೇಟಿ: ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ದೇಶಪಾಂಡೆ ನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿರುವ ರಾಯರ ಬೃಂದಾವನಕ್ಕೆ ಭೇಟಿ ನೀಡಿದ ಶಾಸಕ ಮಹೇಶ ಟೆಂಗಿನಕಾಯಿ ದರ್ಶನ ಪಡೆದರು.

ಶ್ರೀ ಮಠದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ, ಬಿಜೆಪಿ ಮುಖಂಡ ರವಿ ನಾಯಕ, ವಾದಿರಾಜ ಭಟ್​, ಶ್ರೀನಿವಾಸರಾವ್​, ಮಂಜುನಾಥ ಹಳ್ಯಾಳ ಇತರರು ಉಪಸ್ಥಿತರಿದ್ದರು.