rachoteshwar swamiji ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರನ್ನು ಬಾಳು ಮಗಜಿಕೊಂಡಿ ಸನ್ಮಾನಿಸಿದರು.
ಹುಬ್ಬಳ್ಳಿ: rachoteshwar swamiji ಇಲ್ಲಿಯ ಶ್ರೀಸಿದ್ಧಾರೂಢ ಸ್ವಾಮಿ ಮಠಕ್ಕೆ ಅಂತೂರ ಬೆಂತೂರ ಜಗದ್ಗುರು ಬುದೇಶ್ವರ ಸಂಸ್ಥಾನ ಮಠದ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಗುರುವಾರ ಭೇಟಿ ನೀಡಿ ಉಭಯ ಶ್ರೀಗಳ ದರ್ಶನಾಶೀರ್ವಾದ ಪಡೆದರು.
ಬುದೇಶ್ವರ ಮಠದಲ್ಲಿ 33 ದಿನಗಳ ಪರ್ಯಂತ ಕಠಿಣ ಸಮಾಧಿ ಯೋಗವನ್ನು ಮುಗಿಸಿದ ಸ್ವಾಮೀಜಿಗಳು ಪಾದಯಾತ್ರೆ ಮೂಲಕ ಶ್ರೀಮಠಕ್ಕೆ ಆಗಮಿಸಿದರು.
ಶ್ರೀಮಠದ ಶ್ರೀ ಸಿದ್ಧಾರೂಢರ ಗದ್ದುಗೆ, ಶ್ರೀ ಗುರುನಾಥರೂಢರ ಗದ್ದುಗೆ ದರ್ಶನ ಪಡೆದ ಅವರು, ಕೆಲಕಾಲ ಕೈಲಾಸ ಮಂಟಪದಲ್ಲಿ ಇದ್ದರು. ಅಲ್ಲಿ ಭಕ್ತರನ್ನು ಉದ್ದೇಶಿಸಿ ಪ್ರವಚನ ನೀಡಿದರು.
ಈ ಸಂದರ್ಭದಲ್ಲಿ ಶ್ರೀಮಠದ ವತಿಯಿಂದ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳನ್ನು ಶಾಲು ಹೊದಿಸಿ ಲಪುಷ್ಪ ನೀಡಿ ಗೌರವಿಸಲಾಯಿತು.
ಟ್ರಸ್ಟ್ ಕಮಿಟಿ ಚೇರ್ಮನ್ ಬಾಳು ಮಗಜಿಕೊಂಡಿ, ಗೌರವ ಕಾರ್ಯದರ್ಶಿ ವಿನಾಯಕ ಘೋಡಕೆ, ಮುಖಂಡ ನಾಗರಾಜ ಗೌರಿ, ಶ್ರೀಮಠದ ಸಿಬ್ಬಂದಿ ಹಾಗೂ ಭಕ್ತರು ಉಪಸ್ಥಿತರಿದ್ದರು.