food ರೈಲು ನಿಲ್ದಾಣದಲ್ಲಿನ ಆಹಾರ ಮಳಿಗೆ 
ಧಾರವಾಡ

ರೈಲ್ವೆ ಪ್ರಯಾಣಿಕರಿಗೆ ಗುಣಮಟ್ಟದ ಆಹಾರ food

ಆನಂದಕುಮಾರ ಅಂಗಡಿ

ಪ್ರಮುಖ ಮುಖ್ಯಾಂಶಗಳು

  • 528 ಆಹಾರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
  • ನಿಯಮಾನುಸಾರವಲ್ಲದ ಮಾದರಿಗಳ ವಿರುದ್ಧ ಕಾನೂನು ಕ್ರಮ ಆರಂಭಿಸಲಾಗಿದೆ.
  • 64 ಸಾವಿರ ರೂ. ದಂಡ ವಿಧಿಸಲಾಗಿದೆ
ನೈಋತ್ಯ ರೈಲ್ವೆಯ ಎಲ್ಲ ವಿಭಾಗಗಳಲ್ಲಿ ಸ್ವಚ್ಛತೆ, ನೈರ್ಮಲ್ಯ, ಎಫ್​ಎಸ್​ಎಸ್​ಎಐ ಪರವಾನಗಿಯ ಮಾನ್ಯತೆ, ಆಹಾರ ಉತ್ಪನ್ನಗಳ ಮುಕ್ತಾಯ ದಿನಾಂಕ ಹಾಗೂ ಆಹಾರ ನಿರ್ವಹಣಾ ಕ್ರಮಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ.
ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ರೈಲ್ವೆ ವಿಭಾಗಗಳ ವ್ಯಾಪ್ತಿಯ 428 ಕ್ಯಾಟರಿಂಗ್ ಘಟಕಗಳ ಮೇಲೆ ನಿಗಾ ಇರಿಸಲಾಗಿದೆ. ಇದರಲ್ಲಿ 34 ಪ್ರಮುಖ ಘಟಕಗಳು, 272 ಸಣ್ಣ ಘಟಕಗಳು, 122 ಐಆರ್​ಸಿಟಿಸಿ ಘಟಕಗಳು, 38 ಪ್ಯಾಂಟ್ರಿ ಕಾರುಗಳು ಹಾಗೂ ಪ್ರಮುಖ ಬೇಸ್ ಕಿಚನ್​ಗಳು ಸೇರಿವೆ.
2025-26ನೇ ಹಣಕಾಸು ವರ್ಷದಲ್ಲಿ ರೈಲ್ವೆ ಆಹಾರ ಸುರಕ್ಷತಾ ಅಧಿಕಾರಿಗಳು 1,243 ಬಾರಿ ತಪಾಸಣೆ ನಡೆಸಿದ್ದಾರೆ. ಈ ವೇಳೆ 129 ಸುಧಾರಣಾ ನೋಟಿಸ್​ಗಳನ್ನು ನೀಡಲಾಗಿದ್ದು, 528 ಆಹಾರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಅವುಗಳಲ್ಲಿ 512 ಮಾದರಿಗಳು ನಿಯಮಾನುಸಾರವಾಗಿದ್ದವು. ಮಾನದಂಡಗಳಿಗೆ ವಿರುದ್ಧವಾಗಿದ್ದ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಅವಧಿಯಲ್ಲಿ 5.22 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ.
2026-27ರ ಜುಲೈವರೆಗೆ 271 ಬಾರಿ ತಪಾಸಣೆ ನಡೆಸಿ, 29 ಸುಧಾರಣಾ ನೋಟಿಸ್​ಗಳನ್ನು ನೀಡಿದ್ದಾರೆ. 170 ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ನಿಯಮಾನುಸಾರವಲ್ಲದ 3 ಮಾದರಿಗಳ ವಿರುದ್ಧ ಕಾನೂನು ಕ್ರಮ ಆರಂಭಿಸಲಾಗಿದೆ.
ಈ ಸಮಯದಲ್ಲಿ 64 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.