ಹುಬ್ಬಳ್ಳಿಯ ಭವಾನಿ ನಗರ (purandara) ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಕನಕ-ಪುರಂದರೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರಿಗೆ ಸಂಯುತಾ ಪುರಂದರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹುಬ್ಬಳ್ಳಿ: ದಾಸ ಸಾಹಿತ್ಯವು ವಿಶ್ವಕ್ಕೆ ಅಮೂಲ್ಯ (purandara) ಕೊಡುಗೆ ನೀಡಿದೆ. ಈ ಸಾಹಿತ್ಯದಲ್ಲಿ ಯಾವುದೇ ಮಠ, ಪರಂಪರೆ ದೊಡ್ಡದು ಎಂಬುದನ್ನು ಹೇಳಿಲ್ಲ. ಬದಲಿಗೆ ಮಾನವ ಜನ್ಮ ದೊಡ್ಡದೆಂದಿದೆ. ಇದನ್ನು ನಾವು ಪಾಲಿಸಿಕೊಂಡು ಹೋಗಬೇಕಿದೆ ಎಂದು ಹಿರಿಯ ಸಂಶೋಧಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅಭಿಪ್ರಾಯಪಟ್ಟರು.
ಸಂಯುತಾ ಪ್ರತಿಷ್ಠಾನ, ಕ್ಷಮತಾ ಸೇವಾ ಸಂಸ್ಥೆ, ಭವಾನಿ ನಗರ ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಟಿಟಿಡಿ ಹಾಗೂ ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಸಹಯೋಗದಲ್ಲಿ ಇಲ್ಲಿಯ ಭವಾನಿ ನಗರ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಕನಕ-ಪುರಂದರೋತ್ಸವ ಕಾರ್ಯಕ್ರಮದಲ್ಲಿ ಸಂಯುತಾ ಪುರಂದರ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ನಮ್ಮಲ್ಲಿ ಮತೀಯ ಸಾಹಿತ್ಯ ಇರುವಾಗಲೇ ಬ್ರಾಹ್ಮಣೇತರರಿಗೂ ಸಾಧನೆ ಮಾಡಲು ಕಲಿಸಿಕೊಟ್ಟವರು ಹರಿದಾಸರು. ಅಂತಹ ದಾಸ ಸಾಹಿತ್ಯ ಎಲ್ಲ ಮನೆ, ಮನಗಳನ್ನು ಮುಟ್ಟಿದೆ. ಬ್ರಾಹ್ಮಣೇತರರಲ್ಲಿಯೇ ಹೆಚ್ಚು ಕನಕದಾಸರು ಹಾಗೂ ಪುರಂದರದಾಸರು ಪರಿಚಯವಾಗಿದ್ದಾರೆ. ದಾಸರ ಮೂಲಕ ನಾವು ಮದ್ವಾಚಾರ್ಯರು ಹಾಗೂ ಅವರ ತತ್ವಗಳನ್ನು ಮೆಚ್ಚಬೇಕು ಎಂದರು.
ಕ್ಷಮತಾ ಸೇವಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ ಮಾತನಾಡಿ, ದಾಸರು ಸಮಾಜದ ಓರೆ-ಕೋರೆ, ಜಾತಿ ಪದ್ದತಿಯನ್ನು ತಮ್ಮ ಸಾಹಿತ್ಯದ ಮೂಲಕ ಖಂಡಿಸಿ ಜಾಗೃತಿ ಮೂಡಿಸಿದರು. ಆದರೀಗ ಮಹಾನ್ ವ್ಯಕ್ತಿಗಳನ್ನು ಜಾತಿಗೆ ಸೀಮಿತಗೊಳಿಸಿ ಗುರುತಿಸಲಾಗುತ್ತಿದೆ. ಯುವಕರು ಮಾಹನ್ ವ್ಯಕ್ತಿಗಳ ಇತಿಹಾಸ ತಿಳಿಯಬೇಕು ಎಂದರು.
ಪಂ. ಪಾಂಡುರಂಗ ಆಚಾರ್ಯ ಹುನಗುಂದ, ಸಂಯುತಾ ಪ್ರತಿಷ್ಠಾನದ ಗೌರವಾಧ್ಯಕ್ಷ ಎ.ಸಿ. ಗೋಪಾಲ, ಉಪಾಧ್ಯಕ್ಷ ಗಣಪತಿ ಗಂಗೊಳ್ಳಿ, ಕಾರ್ಯಾಧ್ಯಕ್ಷ ಪಿ.ಎಸ್. ಪರ್ವತಿ, ಭವಾನಿ ನಗರ ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಜೆ. ವೇಣುಗೋಪಾಲಾಚಾರ್ಯ, ಕೆಎಂಸಿಆರ್‌ಐ ಮಾಜಿ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಇತರರು ಇದ್ದರು.