public ganesh ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ವಾರ್ಷಿಕ ಮಹಾಸಭೆಯಲ್ಲಿ ಡಾ. ಜಿತೇಂದ್ರ ಮಜೇಥಿಯಾ ಮಾತನಾಡಿದರು. ಶಾಂತರಾಜ ಪೋಳ, ಅಲ್ತಾಫ ಕಿತ್ತೂರ, ಶ್ರೀನಿವಾಸ ಏಕಬೋಟೆ, ಶ್ರೀನಿವಾಸ ಬೋಚಗೇರಿ, ಅನಿತಾ ಜಡಿ, ಅಮರೇಶ ಹಿಪ್ಪರಗಿ, ಎಸ್.ಎಸ್. ಕಮಡೊಳ್ಳಿಶೆಟ್ಟರ್ ಇತರರು ಇದ್ದರು.
- ಸಮಿತಿಗಳ ಮಹಾಮಂಡಳದ ವಾರ್ಷಿಕ ಸಭೆ
ಹುಬ್ಬಳ್ಳಿ: public ganesh ರಾಜ್ಯದ ಜನರ ಗಮನ ಸಳೆಯುವ ರೀತಿಯಲ್ಲಿ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ವಾರ್ಷಿಕ ಮಹಾಸಭೆಯಲ್ಲಿ ನಿರ್ಧರಿಸಲಾಗಿದೆ.
ಇಲ್ಲಿಯ ಮೂರುಸಾವಿರ ಮಠದ ಸಭಾಭವನದಲ್ಲಿ ಭಾನುವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಜೇಥಿಯಾ ಫೌಂಡೇಷನ್ ಚೇರ್ಮನ್ ಡಾ. ಜಿತೇಂದ್ರ ಮಜೇಥಿಯಾ, ಹುಬ್ಬಳ್ಳಿಯ ಸರ್ವ ಗಣೇಶೋತ್ಸವ ಸಮಿತಿಯವರು ಒಕ್ಕಟ್ಟಿನಿಂದ ಮಹಾಮಂಡಳಕ್ಕೆ ಮಹಾ ಶಕ್ತಿಯಾಗಿ ನಿಂತಿದ್ದಾರೆ. ಮಹಾಮಂಡಳದ ನಿರಂತರ ಸೇವೆಯಿಂದ ಶ್ರೀ ಗಣೇಶೋತ್ಸವವು ಅಚ್ಚುಕಟ್ಟಾಗಿ ನಡೆಯುತ್ತಿರುವುದು, ಜನರಿಗೆ ಆಕರ್ಷಣೀಯವಾಗಿದೆ ಎಂದರು.
ಉದ್ಯಮಿ ಶ್ರೀನಿವಾಸ ಏಕಬೋಟೆ ಮಾತನಾಡಿ, ಹುಬ್ಬಳ್ಳಿಯ ಶ್ರೀ ಗಣೇಶೋತ್ಸವ ಸಮಿತಿಯವರು ವೀಕ್ಷಣೆಗೆ ಬರುವ ಭಕ್ತರಿಗೆ ಅನ್ನ ಪ್ರಸಾದ ಸೇವೆ ಮಾಡಿ ದಾಸೋಹ ನಗರವೆಂಬ ಖ್ಯಾತಿ ತಂದಿದ್ದಾರೆ ಎಂದರು.
ಹಿರಿಯ ಸಮಾಜ ಸೇವಕ ಶ್ರೀನಿವಾಸ ಬೋಚಗೇರಿ, ಮಾನವೀಯ ಮೌಲ್ಯ ಎತ್ತಿ ಹಿಡಿಯುವ ಶ್ರೀಗಣೇಶ ಹಬ್ಬವನ್ನು ಎಲ್ಲರೂ ಒಟ್ಟಾಗಿ ಆಚರಿಸುತ್ತಾರೆ ಎಂದರು.
ಮಹಾಮಂಡಳದ ಉಪಾಧ್ಯಕ್ಷ ಅಲ್ತಾಫ ಕಿತ್ತೂರ, ಶಾಂತರಾಜ ಪೋಳ, ಮಹಿಳಾ ವಿಭಾಗದ ಅನಿತಾ ಜಡಿ, ಕಾರ್ಯದರ್ಶಿ ಎಸ್.ಎಸ್. ಕಮಡೊಳ್ಳಿಶೆಟ್ಟರ ಮಾತನಾಡಿದರು.
ಪ್ರತಿಷ್ಠಾಪನೆ: ಸೆ. 14ರಂದು ಸೋಮವಾರ ಶ್ರೀ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ, ಸೆ. 18ರಂದು 5ನೇ ದಿನದ ವಿಗ್ರಹಗಳ ವಿಸರ್ಜನೆ, ಸೆ. 22ರಂದು- 9ನೇ ದಿನ, ಸೆ. 25ರಂದು 12ನೇ ದಿನದ ಶ್ರೀಗಣೇಶ ವಿಗ್ರಹಗಳ ವಿಸರ್ಜನೆ ಕಾರ್ಯಕ್ರಮಗಳನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮೇಲ್ಸೇತುವೆ, ರಸ್ತೆಗಳ ಸುಧಾರಣೆ, ಗಿಡದ ರೆಂಬೆ ಕೊಂಬೆಗಳ ತೆರವು, ಬಡಾವಣೆಗಳಲ್ಲಿ ಕೃತಕ ಭಾವಿ, ತ್ಯಾಜ್ಯ ವಿಲೇವಾರಿ, ನಿರಂತರ ನೀರು ಸೌಲಭ್ಯ, ಸಾರಿಗೆ ಸೌಲಭ್ಯ ಕಲ್ಪಿಸುವುದು ಸೇರಿ ವಿವಿಧ ವಿಷಯಗಳ ಚರ್ಚೆ ಮಾಡಲಾಯಿತು.
ಐ.ಬಿ. ಬೀರೊಳ್ಳಿ, ಮೋಹನ ಪತ್ತಾರ, ಪಾಂಡುರಂಗ ಮೆಹರವಾಡೆ, ಮಹೇಶ ಶೇಟ, ಭೀಮಾಶಂಕರ ಹಿರೇಮಠ, ಎಂ.ಎಸ್. ಶಿರಗಣ್ಣವರ, ಎಂ.ಎನ್. ಹೆಬಸೂರ, ಎಂ.ಎಂ. ಡಂಬಳ, ಅನಿಲ ಕವಿಶೆಟ್ಟಿ, ಅಕ್ಕಮ್ಮ ಕಂಬಳಿ, ಸಂಗೀತಾ ಜಡಿ, ವಿಜಯಲಕ್ಷ್ಮಿ ಏಕಬೋಟೆ, ಅಕ್ಕಮಹಾದೇವಿ ಅಂದೇಲಿಮಠ, ಇತರರು ಪಾಲ್ಗೊಂಡಿದ್ದರು.
ಸಂತೋಷ ಕಟ್ಟಿ ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ಅಮರೇಶ ಹಿಪ್ಪರಗಿ ನಿರೂಪಿಸಿದರು. ಸರೋಜಾ ಛಬ್ಬಿ ವಂದಿಸಿದರು.