skills ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ನಾಲ್ಕು ಕಾರ್ವಿುಕ ಸಂಹಿತೆಗಳ ಜಾಗೃತಿ ಹಾಗೂ ಸಂವಾದ ಕಾರ್ಯಕ್ರಮವನ್ನು ಕೇಂದ್ರದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು.
- ರಫ್ತು ಮಾಡಲು ಯೋಗ್ಯವಿರುವ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವ ಅಗತ್ಯವಿದೆ.
- ಕೈಗಾರಿಕೆ, ಉದ್ಯಮಕ್ಕೆ ಪ್ರೋತ್ಸಾಹ ಮತ್ತು ಸುಧಾರಣೆ ಇದರ ಉದ್ದೇಶ.
- ನಿಯಮಗಳನ್ನು ಆಧುನೀಕರಿಸಿ ಹೊಸ ಸಂಹಿತೆಗಳನ್ನು ರೂಪಿಸಲಾಗಿದೆ.
ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ನಾಲ್ಕು ಕಾರ್ವಿುಕ ಸಂಹಿತೆಗಳ ಜಾಗೃತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2047ಕ್ಕೆ ವಿಕಸಿತ ಭಾರತ ನಿರ್ವಿುಸುವ ಜವಾಬ್ದಾರಿಯಲ್ಲಿ ಎಂಎಸ್ಎಂಇಗಳ ಹಾಗೂ ಜನರ ಪಾತ್ರ ಮುಖ್ಯವಾಗಿದೆ. ರಫ್ತು ಮಾಡಲು ಯೋಗ್ಯವಿರುವ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವ ಅಗತ್ಯವಿದೆ. ಇದಕ್ಕಾಗಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಎಂದು ಹೇಳಿದರು.
ವೇತನ ಸಂಹಿತೆ, ಕೈಗಾರಿಕಾ ಸಂಪರ್ಕ ಸಂಹಿತೆ, ಕಾರ್ವಿುಕರಿಗೆ ಸಾಮಾಜಿಕ ಭದ್ರತಾ ಸಂಹಿತೆ ಮತ್ತು ಉದ್ಯೋಗ ಭದ್ರತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳನ್ನೊಳಗೊಂಡ ನಾಲ್ಕು ಕಾರ್ವಿುಕ ಸಂಹಿತೆಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ.
ಈವರೆಗಿದ್ದ 29 ಕಾರ್ವಿುಕ ಕಾನೂನುಗಳನ್ನು ಪರಾಮಶಿಸಿ, ನಿಯಮಗಳನ್ನು ಆಧುನೀಕರಿಸಿ ಹೊಸ ಸಂಹಿತೆಗಳನ್ನು ರೂಪಿಸಲಾಗಿದೆ. ಪ್ರಗತಿ ಪಥದಲ್ಲಿ ಸಾಗುತ್ತಿರುವ ದೇಶದ ಉದ್ಯಮ ರಂಗಕ್ಕೆ ತಕ್ಕಂತೆ ಕಾರ್ವಿುಕ ವ್ಯವಸ್ಥೆಯನ್ನು ಸಜ್ಜುಗೊಳಿಸುವ ಆಶಯ ಇವುಗಳ ಹಿಂದಿದೆ ಎಂದು ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಎಂಎಸ್ಎಂಇಗಳಿಗೆ ಹೊಸ ಶಕ್ತಿ ತುಂಬುವ ಉದ್ದೇಶದಿಂದ ನಾಲ್ಕು ಕಾರ್ವಿುಕ ಸಂಹಿತೆಗಳನ್ನು ರೂಪಿಸಲಾಗಿದೆ. ದೇಶದಲ್ಲಿರುವ ಕೈಗಾರಿಕೆ, ಉದ್ಯಮಕ್ಕೆ ಪ್ರೋತ್ಸಾಹ ಮತ್ತು ಸುಧಾರಣೆ ಇದರ ಉದ್ದೇಶ ಎಂದು ತಿಳಿಸಿದರು.
ಕೇಂದ್ರದ ಮುಖ್ಯ ಕಾರ್ವಿುಕ ಆಯುಕ್ತ, ಕರ್ನಾಟಕ ಪ್ರಾದೇಶಿಕ ಮುಖ್ಯಸ್ಥ ಎಸ್. ಕೆ. ಮೊಹಂತಿ ಮಾತನಾಡಿದರು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಅಧ್ಯಕ್ಷ ಜಿ. ಕೆ. ಆದಪ್ಪಗೌಡರ, ಕಾರ್ಯದರ್ಶಿ ಉದಯ ರೇವಣಕರ, ಆರೀಫ್ ಲೋಹಾಗಿ, ಸುಭಾಷ ಬಾಗಲಕೋಟೆ, ಸಚಿನ ಮಹೇಂದ್ರಕರ, ಸುಜಯ ಜವಳಿ, ಸಿದ್ದೇಶ ಕಮ್ಮಾರ, ಪ್ರಕಾಶ ಶೃಂಗೇರಿ, ಇತರರು ಇದ್ದರು. ರಾಘವೇಂದ್ರ ಬಾಗಲಕೋಟಿ ನಿರೂಪಿಸಿದರು.