ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹೋರಾಟಗಾರರ ತುರ್ತು ಸಭೆ 
ಧಾರವಾಡ

ಸರ್ಕಾರದ ಅಂತಿಮ ಆದೇಶದವರೆಗೆ ಹೋರಾಟ ನಿಲ್ಲದು

ಧಾರವಾಡ: ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ನಡೆಯುತ್ತಿರುವ ಅನಿದಿರ್ಷ್ಟಾವಧಿ ಧರಣಿ 13 ದಿನ ಪೂರೈಸಿತು. ಪಾತೀತ ಹೋರಾಟ ವೇದಿಕೆಯ ಮುಖಂಡ ಬಿ.ಡಿ. ಹಿರೇಮಠ ನೇತೃತ್ವದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಹೋರಾಟಗಾರರು ತುರ್ತು ಸಭೆ ನಡೆಸಿದರು.
ಈಗಾಗಲೇ ರಾಜ್ಯಪಾಲರು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಶಿಫಾರಸಿಗೆ ಅನುಮೋದನೆ ನೀಡಿದ್ದಾರೆ. ಸರ್ಕಾರ ಕೂಡಲೇ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರ ಅಂತಿಮ ನಿರ್ಧಾರ ಪ್ರಕಟಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಹೋರಾಟಗಾರರು ಘೋಷಿಸಿದರು.
ಸಭೆಯ ನೇತೃತ್ವ ವಹಿಸಿದ್ದ ಹಿರಿಯ ನ್ಯಾಯವಾದಿ ಹಾಗೂ ಹೋರಾಟಗಾರ ಬಿ.ಡಿ. ಹಿರೇಮಠ ಮಾತನಾಡಿ, ಹೋರಾಟದ ಚೆಂಡು ಸರ್ಕಾರದ ಅಂಗಳದಲ್ಲಿದ್ದು, ತುರ್ತು ಕ್ರಮ ಕೈಗೊಳ್ಳಬೇಕು ಎಂದರು.
ಹೋರಾಟಗಾರರಾದ ಮನೋಜ ಪಾಟೀಲ, ವೆಂಕಟೇಶ ಮಾಚಕನೂರ, ಗುರುರಾಜ ಹುಣಸಿಮರದ, ವ್ಯಾಪಾರಸ್ಥರ ಸಂಘದ ಮುಖಂಡ ಶಿವಶಂಕರಪ್ಪ ಹಂಪಣ್ಣವರ, ಹಿರಿಯ ಕಾಂಗ್ರೆಸ್​ ಮುಖಂಡ ವೀರಣ್ಣ ಮತ್ತಿಕಟ್ಟಿ, ಅರವಿಂದ ಏಗನಗೌಡರ, ಈಶ್ವರ ಶಿವಳ್ಳಿ, ರಾಜು ಕಮತಿ, ದಾನಪ್ಪ ಕಬ್ಬೇರ, ವಿಠ್ಠಲ ಕಮ್ಮಾರ, ಮಹಾದೇವ ಹೊರಟ್ಟಿ, ಶಂಭು ಸಾಲಿಮನಿ, ದೀಪಾ ನೀರಲಕಟ್ಟಿ, ಕವಿತಾ ಕಬ್ಬೇರ, ಮಹೇಶ ಶೆಟ್ಟಿ, ಇತರರಿದ್ದರು.
ಹೋರಾಟಕ್ಕೆ ಬಿಜೆಪಿ ಸಾಥ್​
ಪಾಲಿಕೆ ಮೇಯರ್​ ಜ್ಯೋತಿ ಪಾಟೀಲ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಸುರೇಶ ಬೇದರೆ, ಆನಂದ ಯಾವಗಲ್​, ಶಂಕರ ಶೆಳಕೆ, ಅನಿತಾ ಚಳಗೇರಿ, ಚಂದ್ರಿಕಾ ಕೊಟಬಾಗಿ, ಮುಖಂಡರಾದ ಸಂಜಯ ಕಪಟಕರ, ಸುನೀಲ ಮೋರೆ, ಶ್ರುತಿ ಬೆಳ್ಳಕ್ಕಿ, ಇತರರು ಪ್ರತ್ಯೇಕ ಪಾಲಿಕೆ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ವಿವಿಧ ಸಂಟನೆಗಳ ಬೆಂಬಲ
ಪ್ರತ್ಯೇಕ ಪಾಲಿಕೆ ಹೋರಾಟಕ್ಕೆ ಯಾಸೀನ್​ ಹಾವೇರಿಪೇಟ ನೇತೃತ್ವದಲ್ಲಿ ಶ್ರೀ ವಿಶ್ವೇಶ್ವರಯ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳ ಸಂದ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿ ಬೆಂಬಲ ಸೂಚಿಸಿದರು, ಇದೇವೇಳೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಕಲ್ಲು ಒಡೆಯುವ ಕ್ವಾರಿ ಕಾಮಿರ್ಕರ ಸಂ, ಜಯ ಕರ್ನಾಟಕ ಸಂಟನೆ ಕಾರ್ಯಕರ್ತರು ಧರಣಿಯಲ್ಲಿ ಪಾಲ್ಗೊಂಡಿದ್ದರು.