ಇನಾಂವೀರಾಪುರ ಗ್ರಾಮದಲ್ಲಿನ ಮರ್ಯಾದೆ ಹತ್ಯೆ ಖಂಡಿಸಿ ಶ್ರೀಮತಿ ಮಾನ್ಯ ಮಾರ್ಯಾದೆಗೇಡು ಹತ್ಯೆ ವಿರೋಧಿ ಹೋರಾಟ ಸಮಿತಿ ಪದಾಧಿಕಾರಿಗಳು, ಹುಬ್ಬಳ್ಳಿಯಲ್ಲಿ ಸೋಮವಾರ ಮೌನ ಪ್ರತಿಭಟನಾ (protest) ಮೆವರಣಿಗೆ ನಡೆಸಿದರು. 
ಧಾರವಾಡ

(protest) ಮಾನ್ಯ ಹತ್ಯೆ ಖಂಡಿಸಿ ಮೌನ ಪ್ರತಿಭಟನಾ ಮೆರವಣಿಗೆ

ಮರಿದೇವ ಹೂಗಾರ
ಹುಬ್ಬಳ್ಳಿ: ಇನಾಂವೀರಾಪುರ ಗ್ರಾಮದಲ್ಲಿನ ಮರ್ಯಾದೆ ಹತ್ಯೆ ಖಂಡಿಸಿ ಹಾಗೂ ತಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಶ್ರೀಮತಿ ಮಾನ್ಯ ಮಾರ್ಯಾದೆಗೇಡು ಹತ್ಯೆ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಕಪ್ಪು ಪಟ್ಟಿ ಧರಿಸಿ ನಗರದಲ್ಲಿ ಸೋಮವಾರ ಮೌನ ಪ್ರತಿಭಟನಾ (protest) ಮೆರಣಿಗೆ ನಡೆಯಿತು.
ಇಲ್ಲಿಯ ಸಿದ್ಧಾರೂಢರ ಮಠದ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ಹಳೇ ಹುಬ್ಬಳ್ಳಿ ಇಂಡಿಪಂಪ್, ನ್ಯೂ ಇಂಗ್ಲಿಷ್ ಸ್ಕೂಲ್, ಅಕ್ಕಿ ಹೊಂಡ, ದುರ್ಗದ ಬೈಲ್, ಬ್ರಾಡ್‌ವೇ, ಕೊಪ್ಪಿಕರ ರಸ್ತೆ ಮೂಲಕ ಅಂಬೇಡ್ಕರ್ ವೃತ್ತ ತಲುಪಿತು.
ಈ ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ಮರ್ಯಾದೆ ಹತ್ಯೆ ವಿರೋಧಿ ಕಾನೂನು ಜಾರಿಗೆ ತರಬೇಕು, ತಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ವಿಶೇಷ ಪ್ರಕರಣವೆಂದು ಪರಿಗಣಿಸಿ ಸರ್ಕಾರವು ಸಂತ್ರಸ್ತ ವಿವೇಕಾನಂದಗೆ ಸರ್ಕಾರ ಉದ್ಯೋಗ, 10 ಎಕರೆ ಜಮೀನು ನೀಡಬೇಕು ಎಂದು ಆಗ್ರಹಿಸಿದರು.
ನಂತರ ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಹಿರಿಯೂರು ಆದಿಜಾಂಬವ ಮಠದ ಶ್ರೀ ಷಡಕ್ಷರಿ ಮುನಿ ಮಾತನಾಡಿ, ಮಾನ್ಯ ಹತ್ಯೆ ಇಡೀ ನಾಗರಿಕ ಸಮಾಜ ಒಪ್ಪುವಂಥದ್ದಲ್ಲ. ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಜಾತಿ ವ್ಯವಸ್ಥೆ ದೊಡ್ಡ ಶಾಪವಾಗಿದೆ. ಮಾನ್ಯಾಳನ್ನು ತಂದೆ ಕೊಲೆ ಮಾಡಿದ್ದು ತಪ್ಪು. ಕಾನೂನಿನ ಪ್ರಕಾರ ಆತನಿಗೆ ಶಿಕ್ಷೆಯಾಗಲಿ. ಕಲುಷಿತ ವಿಚಾರ ಹೊಂದಿದವರು ಇಂತಹ ದುಷ್ಕೃತ್ಯ ಮಾಡಲು ಸಾಧ್ಯ. ಒಬ್ಬರು ಮಾಡಿದ ತಪ್ಪನ್ನು ಇಡೀ ಸಮಾಜದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.
ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ದೇಶದಲ್ಲಿ ಹಲವಾರು ಮಹಾತ್ಮರು ಬಂದು ಹೋದರೂ ಜಾತಿ ವ್ಯವಸ್ಥೆ ಹೋಗುತ್ತಿಲ್ಲ. ಬಸವಣ್ಣನವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕಿದೆ. ಜನರ ಮನಸ್ಸು ಪರಿವರ್ತನೆಯಾಗಬೇಕು. ನಾಟಕೀಯ ನಡುವಳಿಕೆಯಿಂದ ಸಮಾಜವನ್ನು ತಿದ್ದಲು ಸಾಧ್ಯವಿಲ್ಲ ಎಂದರು.
ನಂತರ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.
ಕೊಪ್ಪಳದ ಶ್ರೀ ಮರುಳ ಸಿದ್ಧೇಶ್ವರ ಸ್ವಾಮೀಜಿ, ಮುಖಂಡರಾದ ವಿಜಯ ಗುಂಟ್ರಾಳ, ಪರಶುರಾಮ ಪೂಜಾರ, ಮೋಹನ ಹಿರೇಮನಿ, ಬಸಪ್ಪ ಮಾದರ, ದೊಡ್ಡರಾಮಪ್ಪ ದೊಡ್ಡಮನಿ ಇತರರು ಇದ್ದರು.