ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ಸಂಟನೆಗಳ ಅನಿದಿರ್ಷ್ಟಾವಧಿ ಧರಣಿ
ಧಾರವಾಡ: ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ಧಾರವಾಡ ಪಾಲಿಕೆ ಕಟ್ಟಡದ ಎದುರು ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆಯ ಧರಣಿ ಸತ್ಯಾಗ್ರಹ ಶುಕ್ರವಾರ 8 ದಿನ ಪೂರೈಸಿತು.
ಧಾರವಾಡ ಶಹರ ಆಟೋ ಚಾಲಕ- ಮಾಲೀಕರ ಸಂ, ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನೆಗಾಗಿ ಧ್ವನಿ ಸಂಟನೆಗಳು ಬೆಂಬಲ ಸೂಚಿಸಿದವು.
ಗಾಂಧಿ ಚೌಕ್ದಿಂದ ಪಾದಯಾತ್ರೆ ಹೊರಟು ಧಾರವಾಡ ಪಾಲಿಕೆ ಕಟ್ಟಡದ ಎದುರು ನಡೆಯುತ್ತಿರುವ ಧರಣಿ ಸ್ಥಳಕ್ಕೆ ತೆರಳಿ ಬೆಂಬಲ ಸೂಚಿಸಿದರು. ಬಸವರಾಜ ಜಾದವ, ಆನಂದ ಸಿಂಗನಾಥ, ಕಾತಿರ್ಕ ನಾಯಕ, ಹಿದಾಯತ ರಾಯಚೂರು, ಟೆರೆನ್ಸ್ ಪಾಲ್, ಶಿವಾನಂದ ಗಿರಿಯಪ್ಪನವರ, ನಿಜಾಮ ರಾಹಿ, ಬಸವರಾಜ ಹೆಬ್ಬಳ್ಳಿ, ಗೌರಮ್ಮ ಬಲೋಗಿ, ಸೂರವ್ವ ಪಾಟಿಲ, ಮಾದುರಿ ಧಾರವಾಡಕರ ಹಾಗೂ ಇತರರು ಪಾಲ್ಗೊಂಡಿದ್ದರು.
* ಸರದಿ ಉಪವಾಸಕ್ಕೆ ಚಾಲನೆ: ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ಈ ಮೊದಲೇ ಘೋಷಿಸಿದಂತೆ ಶುಕ್ರವಾರದಿಂದ ಧರಣಿ ಸ್ಥಳದಲ್ಲಿ ಸರದಿ ಉಪವಾಸ ಸತ್ಯಾಗ್ರಹ ಆರಂಬಿಸಲಾಯಿತು. ಹೋರಾಟಗಾರರಾದ ವೆಂಕಟೇಶ ಮಾಚಕನೂರ, ಮನೋಜ ಪಾಟೀಲ, ಶಿವಶಂಕರ ಹಂಪಣ್ಣವರ ಹಾಗೂ ಪಾಲಿಕೆಯ ಕಾಂಗ್ರೆಸ್ ಸದಸ್ಯರಾದ ದೀಪಾ ನೀರಲಕಟ್ಟಿ ಮತ್ತು ಕವಿತಾ ಕಬ್ಬೇರ ಮೊದಲ ದಿನ ಉಪವಾಸ ಕೈಗೊಂಡರು. ಇನ್ನು ಪ್ರತಿ ದಿನವೂ ಬೇರೆಯವರು ಉಪವಾಸ ಕೈಗೊಳ್ಳಲಿದ್ದಾರೆ ಎಂದು ಹೋರಾಟಗಾರರಾದ ವೆಂಕಟೇಶ ಮಾಚಕನೂರ ಮತ್ತು ಮನೋಜ ಪಾಟೀಲ ತಿಳಿಸಿದ್ದಾರೆ.