ಪ್ರಮುಖ ಮುಖ್ಯಾಂಶಗಳು
ಬಲವಂತದ ಅನ್ಯಾಯದ ಭೂ ಸ್ವಾಧೀನ, ಕಾರ್ಪೆರೇಟ್ ಭೂ ಕಬಳಿಕೆ ಕೂಡಲೇ ನಿಲ್ಲಬೇಕು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ವಿುಕ ಸಂಹಿತೆಗಳನ್ನು ಹಿಂಪಡೆಯಬೇಕು.
ರಾಜ್ಯದಲ್ಲಿ ಪರಿಷ್ಕರಿಸಿ ಪ್ರಕಟಿಸಲಾದ ಕನಿಷ್ಟ ವೇತನವನ್ನು ಮಾಲೀಕರ ಲಾಭಿಗೆ ಮಣಿಯದೇ ಸರ್ಕಾರ ಜಾರಿಮಾಡಬೇಕು ಎಂದು ಆಗ್ರಹಿಸಿದರು.
ವಿಬಿ ಗ್ರಾಮ್ ಜಿ ಕಾಯ್ದೆ ರದ್ದುಪಡಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಮರುಸ್ಥಾಪಿಸಬೇಕು. ಅಸಂಘಟಿತ ಕಾರ್ವಿುಕರಿಗೆ ಸಮಗ್ರ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಜಾರಿಮಾಡಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರಧಾನಿ ಹಾಗೂ ಮುಖ್ಯಮಂತ್ರಿ ಅವರಿಗೆ ತಹಸೀಲ್ದಾರ ಕಚೇರಿ ಅಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು.
ಮಹೇಶ ಪತ್ತಾರ, ಬಸೀರ ಮುಧೋಳ, ಬಿ.ಐ. ಈಳೀಗೇರ, ಚನ್ನಮ್ಮ ಡೊಳ್ಳಿನ, ಸುನಂದಾ ಚಿಗರಿ, ಬಸವರಾಜ ದೇವರಮನಿ, ಯೂಸುಫ್ ಬಳ್ಳಾರಿ, ಚಿದಾನಂದ ಸವದತ್ತಿ, ಬಸವಣ್ಣೆಪ್ಪ ನೀರಲಗಿ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.